ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಗುಜರಾತ್ ನ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯ ಅವರನ್ನು ಗುರುವಾರ (ಅಕ್ಟೋಬರ್ 13) ದೆಹಲಿ ಪೊಲೀಸರು ಬಂಧಿಸಿ ಸರಿತಾ ವಿಹಾರ್ ಪೊಲೀಸ್ ಠಾಣೆಗೆ ಕರೆದೊಯ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರ: 13 ಜನರನ್ನು ಕೊಂದ ನರಭಕ್ಷಕ ಹುಲಿ ಕೊನೆಗೂ ಜೀವಂತವಾಗಿ ಸೆರೆ
ವಿಡಿಯೋವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಶ್ಲೀಲ ಹೇಳಿಕೆ ನೀಡಿರುವ ಆರೋಪದಡಿ ಆಮ್ ಆದ್ಮಿ ಪಕ್ಷದ ಮುಖಂಡ ಗೋಪಾಲ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ಜಾರಿ ಮಾಡಿತ್ತು.
ನನ್ನನ್ನು ಜೈಲಿಗೆ ಹಾಕುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಬೆದರಿಕೆ ಹಾಕಿರುವುದಾಗಿ ಗೋಪಾಲ್ ಇಟಾಲಿಯಾ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಟೇಲ್ ಸಮುದಾಯಕ್ಕೆ ಜೈಲುವಾಸ ಹೊರತುಪಡಿಸಿ ಬೇರೆ ಏನು ನೀಡಿದೆ. ಬಿಜೆಪಿ ಪಾಟಿದಾರ್ ಸಮುದಾಯವನ್ನು ದ್ವೇಷಿಸುತ್ತಿದೆ. ನಾನು ಸರ್ದಾರ್ ಪಟೇಲ್ ವಂಶದವನು, ನಿಮ್ಮ ಜೈಲಿಗೆ ನಾನು ಹೆದರುವುದಿಲ್ಲ, ನನ್ನ ಜೈಲಿಗೆ ಹಾಕಿ” ಎಂದು ಗೋಪಾಲ್ ಇಟಾಲಿಯಾ ಟ್ವೀಟ್ ಮಾಡಿದ್ದಾರೆ.
“ಗೋಪಾಲ್ ಇಟಾಲಿಯಾ ಮಹಿಳಾ ಆಯೋಗದ ಕಚೇರಿಯ ಹೊರಗೆ ರಂಪಾಟ ನಡೆಸಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ರೇಖಾ ಶರ್ಮಾ ಟ್ವೀಟ್ ಮಾಡಿದ್ದ ನಂತರ ಗೋಪಾಲ್ ಬಂಧನವಾಗಿರುವುದಾಗಿ” ವರದಿ ತಿಳಿಸಿದೆ.