Advertisement

Borewell: 19 ಗಂಟೆಗಳ ಕಾರ್ಯಾಚರಣೆ; ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಕಂದಮ್ಮ ಮೃತ್ಯು

11:07 AM Jun 04, 2023 | Team Udayavani |

ಗುಜರಾತ್:‌ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಮೃತಪಟ್ಟಿರುವ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ.

Advertisement

ಜಾಮ್‌ನಗರ ನಗರದಿಂದ 40 ಕಿ.ಮೀ ದೂರದಲ್ಲಿರುವ ತಮಾಚನ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಕುಟುಂಬಕ್ಕೆ ಸೇರಿದ 2 ವರ್ಷದ‌ ಹೆಣ್ಣು ಮಗು ಶನಿವಾರ ಬೆಳಗ್ಗೆ 9:30 ಗಂಟೆಯ ಸುಮಾರಿಗೆ ಆಟವಾಡುತ್ತಿದ್ದಾಗ ಕೃಷಿ ಜಮೀನಲ್ಲಿದ್ದ 200 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದೆ.

ಇದನ್ನೂ ಓದಿ: Telangana Polls; ತೆಲಂಗಾಣ ಚುನಾವಣೆಗೆ ಬಿಜೆಪಿ ಜತೆ ಟಿಡಿಪಿ ಮೈತ್ರಿ?

ಘಟನೆ ತಿಳಿದ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಎನ್‌ ಡಿಆರ್‌ ಎಫ್ ಸೇರಿದಂತೆ ಇತರ ಸಿಬ್ಬಂದಿಗಳು ಜೊತೆಯಾಗಿದ್ದಾರೆ. 20 ಆಳದಲ್ಲಿ ಸಿಲುಕಿದ್ದ ಮಗುವನ್ನು ಸತತ 19 ಗಂಟೆಗಳ ಕಾರ್ಯಾಚರಣೆಯ ಬಳಿಕ ಭಾನುವಾರ ಮುಂಜಾನೆ 5:45 ರ ಸಮಯಕ್ಕೆ ಹೊರ ತೆಗೆಯಲಾಯಿತು. ಪರೀಕ್ಷಿಸಿದ ಬಳಿಕ ಮಗು ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next