Advertisement

ಏಕತಾ ಪ್ರತಿಮೆ ಸಮೀಪ ಅತಿಥಿ ಗೃಹ: ರಾಜ್ಯಗಳಿಗೆ ಗುಜರಾತ್‌ ಮನವಿ

05:03 PM Dec 11, 2018 | udayavani editorial |

ಕೋಲ್ಕತ : ದಿನಕ್ಕೆ ಸುಮಾರು 30,000 ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಗುಜರಾತ್‌ನಲ್ಲಿನ ಸರ್ದಾರ್‌ ವಲಭ ಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆ ತಾಣ ಸಮೀಪ ಅತಿಥಿ ಗೃಹಗಳನ್ನು ನಿರ್ಮಿಸುವಂತೆ ಗುಜರಾತ್‌ ಸರಕಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿನಂತಿಸಿದೆ.

Advertisement

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗುಜರಾತ್‌ನ ಶಿಕ್ಷಣ, ಕಾನೂನು, ನ್ಯಾಯ ಮತ್ತು ಪೌರ ವಾಯುಯಾನ ಸಚಿವ ಭೂಪೇಂದ್ರ ಸಿನ್ಹಾ ಚುದಾಸಮ ಅವರು ಕೆಲವು ರಾಜ್ಯಗಳು ಈಗಾಗಲೇ ಏಕತಾ ಪ್ರತಿಮೆ ತಾಣಕ್ಕೆ ಸಮೀಪ ತಮ್ಮ ಅತಿಥಿ ಗೃಹ ನಿರ್ಮಿಸುವ ಆಸಕ್ತಿ ತೋರಿವೆ ಎಂದು ಹೇಳಿದರು. 

ಗುಜರಾತ್‌ನ ನರ್ಮದಾ ಜಿಲ್ಲೆಯಯಲ್ಲಿ 3,000 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ದಾರ್‌ ಪಟೇಲ್‌ ಅವರು 180 ಅಡಿಯ, ವಿಶ್ವದ ಅತೀ ಎತ್ತರದ ಪ್ರತಿಮೆಯು ಪ್ರವಾಸಿಗರಆಕರ್ಷಣೆಯ ಕೇಂದ್ರವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next