Advertisement

ಮಾರ್ಗಸೂಚಿಯಂತೆ ಪರ್ಯಾಯೋತ್ಸವ: ರಘುಪತಿ ಭಟ್‌

01:15 AM Nov 30, 2021 | Team Udayavani |

ಉಡುಪಿ: ಕೊರೊನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊರಡಿಸಲಿರುವ ಮಾರ್ಗಸೂಚಿಯನ್ನು ಪಾಲಿಸಿ ಕೊಂಡು ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಸಲಾಗುವುದು ಎಂದು ಶಾಸಕ ಹಾಗೂ ಪರ್ಯಾ ಯೋತ್ಸವ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಪರ್ಯಾಯಕ್ಕೆ ಆಹ್ವಾನಿಸುವ ಜತೆಗೆ ಸಹಕಾರವನ್ನು ಕೋರಿದ್ದೇವೆ. ರಾಜ್ಯ ಸರಕಾರದಿಂದ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದ್ದಾರೆ. ಚುನಾವಣ ನೀತಿ ಸಂಹಿತೆ ಮುಗಿದ ತತ್‌ಕ್ಷಣವೇ ಅಧಿಕಾರಿಗಳ ಸಭೆ ನಡೆಸಲಿದ್ದೇವೆ ಎಂದರು.

ಅಭಿವೃದ್ಧಿ ಕಾರ್ಯ
ನಗರಸಭೆ ವ್ಯಾಪ್ತಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ಇದಕ್ಕೆ ಚುನಾವಣ ಆಯೋಗದಿಂದ ವಿಶೇಷ ಅನುಮತಿ ಪಡೆಯಲಾಗಿದೆ. ನಗರಸಭೆ ನಿಧಿಯಿಂದ ಶೀಘ್ರ ಟೆಂಡರ್‌ ಪ್ರಕ್ರಿಯೆ ಆರಂಭಿಸಿ, 3 ಕೋ.ರೂ. ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವುದು ಹಾಗೂ 4 ಕೋ.ರೂ. ವೆಚ್ಚದಲ್ಲಿ ಮುಖ್ಯರಸ್ತೆ ಕಾಮಗಾರಿ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯ ನಡೆಸಲಿದ್ದೇವೆ. ಜತೆಗೆ ಸರಕಾರಕ್ಕೆ 30 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಪರ್ಯಾಯ ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾ ತಂಡಗಳನ್ನು ನಿಯೋಜಿಸಿ, ಒಂದು ಟ್ಯಾಬ್ಲೊ ಕೂಡ ವ್ಯವಸ್ಥೆ ಮಾಡುವ ಬಗ್ಗೆ ಸಚಿವ ಸುನಿಲ್‌ ಕುಮಾರ್‌ ಭರವಸೆ ನೀಡಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದ ಕಲಾತಂಡಗಳು ಬರಲಿವೆ. ಪರ್ಯಾಯ ವಿಷಯ ವಾಗಿ ನಗರ ಸ್ವತ್ಛತೆಗಾಗಿ 75 ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿ ಕೊಳ್ಳಲಾಗುತ್ತದೆ. ನಗರದ ಅಲಂಕಾರ, ಸುಣ್ಣಬಣ್ಣ ಬಳಿ ಯುವುದು ಸಹಿತವಾಗಿ ಸಿದ್ಧತಾ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಡಾ.ಕೆ.ಸುಧಾಕರ್‌

Advertisement

ಸಮಿತಿಯ ಗೌ| ಅಧ್ಯಕ್ಷ ಕೆ. ಸೂರ್ಯ ನಾರಾಯಣ ಉಪಾ ಧ್ಯಾಯ, ಖಜಾಂಚಿ ರವಿಪ್ರಸಾದ್‌, ಕಾರ್ಯದರ್ಶಿ ವಿಷ್ಣುಪ್ರಸಾದ್‌ ಪಾಡಿಗಾರ್‌, ಸಲಹೆಗಾರ ಪ್ರೊ| ಶ್ರೀಶ ಆಚಾರ್ಯ, ಪಿಆರ್‌ಒ ಬಿ.ವಿ. ಲಕ್ಷ್ಮೀನಾರಾಯಣ ಪತ್ರಿಕಾ ಗೋಷ್ಠಿಯಲ್ಲಿದ್ದರು.

ಡಿ. 8: ಭತ್ತ ಮುಹೂರ್ತ
ಪರ್ಯಾಯ ಪೀಠಾರೋಹಣಕ್ಕಿಂತ ಸುಮಾರು ಒಂದು ತಿಂಗಳ ಮೊದಲು ನಡೆಯುವ ಭತ್ತ ಮುಹೂರ್ತವನ್ನು ಡಿ. 8ಕ್ಕೆ ನಿಗದಿ ಮಾಡಿದ್ದೇವೆ. ಈ ವೇಳೆ ಕಟ್ಟಿಗೆ ರಥಕ್ಕೆ ಶಿಖರವನ್ನು ಇಡುತ್ತಾರೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಚಿನ್ನದ ಪಲ್ಲಕಿಯಲ್ಲಿ ಸಿಂಗರಿಸಿದ ಭತ್ತದ ಮುಡಿಯನ್ನಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮೂಲಕ ತಂದು ಪರ್ಯಾಯ ಶ್ರೀಕೃಷ್ಣ ಮಠದ ಅಧಿಕೃತ ಕಾರ್ಯಾಲಯ, ಬಡಗು ಮಾಳಿಗೆಯಲ್ಲಿ ಭತ್ತದ ಮುಡಿ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಡಿ. 8ರ ಬೆಳಗ್ಗೆ 8.22ಕ್ಕೆ ನಡೆಯುವ ಧನುರ್ಲಗ್ನ ಸುಮುಹೂರ್ತದಲ್ಲಿ ಇದು ನಡೆಯಲಿದೆ ಎಂದು ರಘುಪತಿ ಭಟ್‌ ತಿಳಿಸಿದರು.

ಹೊರೆ ಕಾಣಿಕೆ
ಪರ್ಯಾಯ ಹಿನ್ನೆಲೆಯಲ್ಲಿ ಡಿ. 11ರಿಂದ 17ರ ವರೆಗೆ ಹೊರೆ ಕಾಣಿಕೆಗಳು ಬರಲಿವೆ. ಮೊದಲ ದಿನ ಉಭಯ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರತ್ಯೇಕವಾಗಿ ಹೊರೆಕಾಣಿಕೆ ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next