ಪಡುಪಣಂಬೂರು: ಇಂದಿನ ಮಕ್ಕಳು ಮುಂದಿನ ದೇಶದ ಭವಿಷ್ಯವಾಗಿರುವುದರಿಂದ ಅವರಿಂದಲೇ ಸ್ವಚ್ಛತಾ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದರಿಂದ ಸ್ವಚ್ಛತೆಯ ಜಾಗೃತಿ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ಪಡುಪಣಂಬೂರು ಗ್ರಾ. ಪಂ.ನ ಅಧ್ಯಕ್ಷ ಮೋಹನ್ ದಾಸ್ ಹೇಳಿದರು.
ಪಡುಪಣಂಬೂರು ಗ್ರಾ.ಪಂ.ನ ವಠಾರದಲ್ಲಿ ಪ್ರಾರಂಭಗೊಂಡ ಸ್ವಚ್ಛ ಮೇವ ಜಯತೇ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಚಾಯತ್‌ನ ಕಾರ್ಯದರ್ಶಿ ಲೋಕನಾಥ ಭಂಡಾರಿ ಅವರು ಸ್ವಚ್ಛ ಮೇವ ಜಯತೇ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿ, ಇಂದು ಸ್ವಚ್ಛತೆ ಎನ್ನುವುದು ದೈನಂದಿನ ಚಟುವಟಿಕೆಯಾಗಬೇಕು, ನಮ್ಮ ಮನ ಹಾಗೂ ಮನೆಯ ಕಸವನ್ನು ನಾವೇ ಪರಿಶುದ್ಧಗೊಳಿಸಲು ಪ್ರಯತ್ನ ನಡೆಸಿದಲ್ಲಿ ಮಾತ್ರ ಈ ಆಂದೋಲನದ ಉದ್ದೇಶ ಈಡೇರುತ್ತದೆ. ಮಕ್ಕಳ ಮನಸ್ಸು ಮೃದುವಾದುದರಿಂದ ಅವರಿಂದಲೇ ಈ ಆಂದೋಲನ ವಿಶೇಷತೆಯನ್ನು ಪಡೆಯಲಿದೆ ಎಂದರು.
ಪಂಚಾಯತ್‌ನ ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಹೇಮನಾಥ ಅಮೀನ್, ಲೀಲಾ ಬಂಜನ್, ಪುಷ್ಪಾವತಿ, ಪುಷ್ಪಾ ಯಾನೆ ಶ್ವೇತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ವಿ. ಕ್ಯಾಥರಿನ್, ಪಂಚಾಯತ್‌ನ ಸಿಬಂದಿಗಳಾದ ಸುನೀತಾ, ನಮಿತಾ, ದೀಪ್ತಿ, ಬಬಿತಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಕ್ಕಳಿಂದ ವಿಶೇಷ ಜಾಥಾ ನಡೆಯಿತು. ಪಂಚಾಯತ್ ಸಿಬಂದಿ ಶರ್ಮಿಳಾ ಹಿಮಕರ್ ಸ್ವಾಗತಿಸಿದರು, ಅಭಿಜಿತ್ ಸುವರ್ಣ ವಂದಿಸಿದರು, ದಿನಕರ್ ನಿರೂಪಿಸಿದರು.