Advertisement

ಹಿರಿಯರ ಮಾರ್ಗದರ್ಶನ ಎಲ್ಲರಿಗೂ ದಾರಿದೀಪ: ಕರಡಿ

06:04 PM Oct 02, 2020 | Suhan S |

ಕೊಪ್ಪಳ: ಹಿರಿಯ ನಾಗರಿಕರು ನಮ್ಮೆಲ್ಲರ ಜೀವನದ  ಮೂಲ ಬೇರುಗಳಾಗಿದ್ದು, ಮಾರ್ಗದರ್ಶಿಗಳಾಗಿ ನಮಗೆ ಬದುಕು ರೂಪಿಸಿಕೊಳ್ಳಲು ಅವರಭಾವನಾತ್ಮಕ, ಅನುಭವ ಆಧಾರಿತ ಬೆಂಬಲ ಅಗತ್ಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ನಗರದ ಜಿಪಂ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ, ಅವರಿಗೆ ಅವಶ್ಯಕವಾದ ಎಲ್ಲ ಸೌಲಭ್ಯ ನೀಡಿ ಬೆಳೆಸುತ್ತಾರೆ. ಸ್ವಂತ ಬದುಕು ಕಟ್ಟಿಕೊಳ್ಳಲು ಸಶಕ್ತರನ್ನಾಗಿಸಿ, ಪ್ರತಿ ಕ್ಷಣ ನಮ್ಮ ಬೆಂಬಲಕ್ಕೆ ನಿಂತು ನಮ್ಮ ಯಶಸ್ಸಿನಲ್ಲಿ ಅವರು ಸಂತೋಷ ಕಾಣುತ್ತಾರೆ. ಆದ್ದರಿಂದ ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲುಹಿರಿಯರ ಮಾರ್ಗದರ್ಶನ, ಸಲಹೆ ಪಡೆಯಬೇಕು. ಮುಪ್ಪಿನಲ್ಲಿ ಅವರಿಗೆ ಮಕ್ಕಳು ನೆರಳಾಗಬೇಕು ಎಂದರು.

ಹಿರಿಯ ನಾಗರಿಕರು ಸರ್ಕಾರದಿಂದ ಸಿಗುವಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಿರಿಯರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿಕೇಂದ್ರ ರಚಿಸಲಾಗಿದೆ. ನೇರವಾಗಿ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದರೆ ಸಂಬಂಧಪಟ್ಟ ಅ ಧಿಕಾರಿಗಳು ಪರಿಹಾರ ಒದಗಿಸುತ್ತಾರೆ. ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಿ.ಕೆ. ಇಮಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 97,295 ನಾಗರಿಕರಿರುವುದಾಗಿ ಅಂದಾಜಿಸಲಾಗಿದೆ. ಇಲಾಖೆಯಿಂದ ಇಲ್ಲಿವರೆಗೂ 52,198 ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಿಸಿದೆ. ಸರ್ಕಾರದ ಅನುದಾನದಲ್ಲಿ 2 ವೃದ್ಧಾಶ್ರಮಗಳನ್ನು ನಡೆಸುತ್ತಿದ್ದು, ಕುಕನೂರಿನ ವಿದ್ಯಾನಂದ ಗುರುಕುಲ ವೃದ್ಧಾಶ್ರಮ ಮತ್ತು ಭಾಗ್ಯನಗರದ ಮೈತ್ರಿ ವೃದ್ಧಾಶ್ರಮನಿರ್ವಹಿಸಲಾಗುತ್ತಿದೆ. ಇದರಲ್ಲಿ 50 ಜನ ವೃದ್ಧರು ಆಶ್ರಯ ಪಡೆದಿದ್ದಾರೆ ಎಂದರು.

Advertisement

ಹಿರಿಯ ನ್ಯಾಯವಾದಿ ವಿ.ಎಂ. ಭೂಸನೂರಮಠ ಉಪನ್ಯಾಸ ನೀಡಿದರು. ಜಿಲ್ಲೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಸಿ.ವಿ. ಜಡಿಯವರ, ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಹಾಗೂ ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಹಿರಿಯ ನಾಗರಿಕರಸಬಲೀಕರಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮುದಿಯಪ್ಪ ಮೇಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next