Advertisement

ಅಲ್ಪಜ್ಞರಿಂದ ಮಾರ್ಗದರ್ಶನಇಂದಿನ ದುರಂತ: ಬನ್ನಂಜೆ

11:37 AM Dec 28, 2017 | Team Udayavani |

ಬೆಂಗಳೂರು: ಏನೂ ಗೊತ್ತಿಲ್ಲದವರು ಜಗತ್ತಿಗೆ ಉಪದೇಶ ಮಾಡಲು ಹೊರಟಿರುವುದು. ಅರೆಬರೆ ತಿಳಿದಿರುವ ಅಲ್ಪಜ್ಞರು ಮಾರ್ಗದರ್ಶನ ಮಾಡುತ್ತಿರುವುದು ದುರಂತ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ತೀಕ್ಷ್ಣವಾಗಿ ಹೇಳಿದ್ದಾರೆ.

Advertisement

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬುಧವಾರ ನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಬನ್ನಂಜೆ ಪುರಸ್ಕಾರ-2017′ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಪರಂಪರೆ ಮತ್ತು ಜಾತಿ ಮಾತ್ರ ಶ್ರೇಷ್ಠ ಎಂಬ ಭ್ರಮೆಯಲ್ಲಿ ಎಲ್ಲರೂ ಇದ್ದಾರೆ ಎಂದು ಹೇಳಿದರು. 

ಸಾಧಕರ ವಿಶೇಷತೆ: ಸತ್ಸಂಗ ಫೌಂಡೇಷನ್‌ ಬೆಂಗಳೂರು ಇದರ ಅಧ್ಯಕ್ಷ ಶ್ರೀ ಎಂ ಮಾತನಾಡಿ, ಬೌದ್ಧಿಕತೆ ಎಲ್ಲವೂ ಅಲ್ಲ ಅನ್ನುವುದು ವೇದ- ಉಪನಿಷತ್‌ಗಳು ಸಾಬೀತುಪಡಿಸಿವೆ ಎಂದರು, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, ಬನ್ನಂಜೆಯವರ ಬರಹದ ವಿಸ್ತಾರ ವಿಶಾಲವಾದದ್ದು. ಅವರ ಬರಹ ಭೂಮಿ ಮತ್ತು ವ್ಯೂಮವನ್ನು ವ್ಯಾಪಿಸಿದೆ ಎಂದು ಹೇಳಿದರು.

ಅಧ್ಯಯನ ಕೇಂದ್ರ: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವೀಣಾ ಬನ್ನಂಜೆ ಮಾತನಾಡಿ, ಪ್ರತಿಷ್ಠಾನದಿಂದ ಬೆಂಗಳೂರಿನಲ್ಲಿ “ಬನ್ನಂಜೆ ಅಧ್ಯಯನ ಕೇಂದ್ರ’ ಸ್ಥಾಪಿಸುವ ಯೋಜನೆಯಿದೆ. ಇದರಲ್ಲಿ ಬನ್ನಂಜೆಯವರ ಸಾಹಿತ್ಯ ಅಧ್ಯಯನಕ್ಕೆ ಗ್ರಂಥಾಲಯ. ಭಾಷಣಗಳ ಆಡಿಯೋ ಮತ್ತು ವಿಡಿಯೋ ವೀಕ್ಷಣೆಗೆ ಅವಕಾಶ. ಜೊತೆಗೆ ಬನ್ನಂಜೆಯವರು ಅಲ್ಲೇ ವಾಸ ಮಾಡುವ ವ್ಯವಸ್ಥೆಯ ಇರುತ್ತದೆ. ಅಲ್ಲದೇ ಒಂದು ಸಭಾಂಗಣ ಮಾಡಿ ಅಲ್ಲಿ ಬನ್ನಂಜೆಯವರ ಉಪನ್ಯಾಸಗಳು ನಿರಂತರವಾಗಿ ನಡೆಯುವ ವ್ಯವಸ್ಥೆ ಮಾಡಲಾಗುವುದು ಎಂದರು.

ಪುರಸ್ಕಾರ: ಈ ವೇಳೆ ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಡಾ. ಶಂಕರ್‌ ರಾಜಾರಾಮನ್‌ ಅವರಿಗೆ 2017ನೇ ಸಾಲಿನ “ಬನ್ನಂಜೆ ಪುರಸ್ಕಾರ’ ಪ್ರದಾನ ಮಾಡಲಾಯಿತು. ಅಲ್ಲದೇ ಬನ್ನಂಜೆಯವರ ಕವನ ಸಂಕಲನ “ಇನ್ನಷ್ಟು ಹೇಳದೆ ಉಳಿದದ್ದು ಹಾಗೂ ವಿಷ್ಣು ಪುರಾಣದ ಕನ್ನಡ ರೂಪ “ಪರಾಶರ ಕಂಡ ಪರತತ್ವ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಇತರರು ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next