ಕೋಲಾರ: ಅತಿಥಿ ಉಪನ್ಯಾಸಕರ ವೇತನವನ್ನು ಕೇವಲ ಮೂರು ಸಾವಿರ ಮಾತ್ರ ಹೆಚ್ಚಿಸಿ ಮತ್ತೆನಿರುದ್ಯೋಗ ಸೃಷ್ಟಿಸಿದ ಸರ್ಕಾರದ ನಡೆ ಸರಿಯಲ್ಲ. ಈ ಕೂಡಲೇ ಆದೇಶ ರದ್ದುಗೊಳಿಸಿ ರಾಜ್ಯದ ಎಲ್ಲಾಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಡಾ.ಲಕ್ಷ್ಮೀದೇವಿ ಒತ್ತಾಯಿಸಿದರು.
ನಗರದ ನೀರಾವರಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಅತಿಥಿ ಉಪನ್ಯಾಸಕರ ಪ್ರತಿಭಟನೆಯ ನೇತೃತ್ವ ವಹಿಸಿಮಾತನಾಡಿದ ಅವರು, ಹಲವು ಬೇಡಿಕೆಗಳಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು, ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚುಸಹಾಯಧನವನ್ನು ಅತಿಥಿ ಉಪನ್ಯಾಸಕರಿಗೆ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳಿರುವುದು ಶುದ್ಧ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶುದ್ಧ ಸುಳ್ಳು: ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್‌ಬಾಬು ಮಾತನಾಡಿ, ಸರ್ಕಾರ ಕಳೆದ ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ತಾಂತ್ರಿಕವಾಗಿ ಯೋಚನೆಮಾಡಿದರೆ ಒಬ್ಬರಿಗೆ 3 ಸಾವಿರ ರೂ. ಮಾತ್ರ ಹೆಚ್ಚುಮಾಡಿದ್ದಾರೆ. ಆದರೆ, 30, 32 ಸಾವಿರ ರೂ.ಕೊಡುತ್ತೇವೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ಶುದ್ಧ ಸುಳ್ಳು ಎಂದು ಆರೋಪಿಸಿದ್ದಾರೆ.ಸಂಘದ ಕಾರ್ಯದರ್ಶಿ ವಿ.ಬಿ.ಶಿವಣ್ಣ ಮಾತನಾಡಿ, ಇನ್ನು ಸರ್ಕಾರದ ತೀರ್ಮಾನದಲ್ಲಿ ಉದ್ಯೋಗ ಭದ್ರತೆ ಇಲ್ಲ. ಇದೊಂದು ಕಡೆ ಒಡೆದು ಆಳುವ ನೀತಿ. ಯಾರೂ ಕೂಡ ದೃತಿಗೆಡುವುದುಬೇಡ. ನಮ್ಮ ಹೋರಾಟ ಮುಂದುವರಿಯುತ್ತದೆ. 14 ಸಾವಿರ ಮಂದಿಗೂ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಬೇಸರದ ಸಂಗತಿ: ಉಪಾಧ್ಯಕ್ಷ ಡಾ.ಶರಣಪ್ಪ ಗಬ್ಬೂರು ಮಾತನಾಡಿ, ನಮ್ಮ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನು ಮಾತ್ರ ಹೆಚ್ಚಿಗೆ ಮಾಡಿರುವುದು ಬೇಸರದ ಸಂಗತಿ. ಆದರೆ, ಅತಿಥಿ ಉಪನ್ಯಾಸಕರಿಗೆ ಬೇಕಿರುವುದು ಸಂಬಳ ಅಲ್ಲ. ಸೇವಾ ಭದ್ರತೆ.ಕಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರುಬಂದಾಗ ನಮ್ಮ ವೃತ್ತಿಯನ್ನೇ ತೊರೆಯಬೇಕಿದೆ, ಈ ಕ್ರಮ ಸರಿಯಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನೂರ್‌ಅಹಮದ್, ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ಶಿವ, ಡಾ.ಸರಿತಕುಮಾರಿಸೋಮಶೇಖರ್, ಶ್ರೀನಿವಾಸ್, ಚೇತನ, ಸುಮಿತ್ರಾ,ಪುಷ್ಪಾ, ಎಸ್.ರವಿ, ಶೋಭಾ, ಲಕ್ಷ್ಮೀದೇವಿ, ಕುಸುಮಾ, ರಾಜೇಶ್ವರಿ, ಕಾವ್ಯಾ, ಮಾಲತಿ, ಲಾವಣ್ಯಾ, ಮಮತಾ, ಸರಿತಾ, ಕುಸುಮಾ, ಜಲಜಾ, ಶಿಲ್ಪಾ,ಕವಿತಾ, ಗೌರಿ, ಡಾ.ರವೀಂದ್ರ, ಸಂದೀಪ್, ಪ್ರದೀಪ್,ಪ್ರಕಾಶ್, ಕಿಶೋರ್, ಬಾಲಾಜಿ, ಶಿವಶಂಕರ್,ಚಂಜಿಮಲೆ ಶ್ರೀನಿವಾಸ್, ಮುರುಳೀಧರ, ಹರೀಶ್,ನಾಗರಾಜ್, ಚಾಣಕ್ಯ, ಅಶೋಕ್, ಶಂಕರ್,ಮುಹಮ್ಮದ್ ಇಮ್ರಾನ್, ಗೀತಾ, ಸರಣ್ಯ, ಯಲ್ಲಪ್ಪ,ಮಂಜುಳಾ, ಮುನಿವೆಂಕಟಸ್ವಾಮಿ, ರಮೇಶ್,ಗೌರಿಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಎನ್. ರವೀಂದ್ರನಾಥ್ ಉಪಸ್ಥಿತರಿದ್ದರು.