ಮಂಗಳೂರು: ಅತಿಥಿ ಉಪನ್ಯಾಸಕರು “ಪರೀಕ್ಷಾ ಕಾರ್ಯ’ಕ್ಕೆ ಹಾಜರಾಗಲು ಒಂದು ಸೆಮಿಸ್ಟರ್‌ನಲ್ಲಿ ಐದು ದಿನಗಳಂತೆ ಎರಡು ಸೆಮಿಸ್ಟರ್‌ಗಳಲ್ಲಿ ಒಟ್ಟು 10 ದಿನಗಳಿಗೆ ಮಾತ್ರ ಅವಕಾಶ ಎಂದು ಕಾಲೇಜು ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿ ಸಿರುವ ಸುತ್ತೋಲೆ ಅವರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.
ಮಂಗಳೂರು ವಿ.ವಿ.ಯ ಬಿಕಾಂ ಪದವಿ ಪರೀಕ್ಷೆ ಮೌಲ್ಯಮಾಪನ ಶುಕ್ರವಾರ, ಬಿಬಿಎಯದ್ದು ಗುರುವಾರ ಮುಗಿದಿದೆ. ಮೌಲ್ಯಮಾಪನಕ್ಕೆ ಹಾಜರಾಗುವಂತೆ ಪ್ರತೀ ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರ ಮೂಲಕ ತಿಳಿಸ ಲಾಗಿತ್ತು. ಕೆಲವರಷ್ಟೇ ಹಾಜರಾದ ಕಾರಣ ಸಕಾಲದಲ್ಲಿ ಮೌಲ್ಯಮಾಪನ ಸಾಧ್ಯವಿಲ್ಲ ಎಂದು ವಾಣಿಜ್ಯ ಪರೀಕ್ಷಾಮಂಡಳಿಯು ವಿ.ವಿ.ಗೆ ತಿಳಿಸಿದೆ. ಆದ್ದರಿಂದ “ಪರೀಕ್ಷಾ ಕಾರ್ಯ ಎಲ್ಲ ಮೌಲ್ಯ ಮಾಪಕರ ಆದ್ಯ ಕರ್ತವ್ಯ. ಗೈರು ಹಾಜ ರಾದಲ್ಲಿ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ವಿ.ವಿ. ಯಿಂದ ಕಾಲೇಜು ಗಳಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು. ಒಟ್ಟಿನಲ್ಲಿ ಮಧ್ಯಾಂತರ ರಜಾ ಸಮಯದಲ್ಲಿ 15 ದಿನ ನಡೆದ ಮೌಲ್ಯ ಮಾಪನ ಅತಿಥಿ ಉಪನ್ಯಾಸಕರಿಗೆ ಬಿಸಿ ತುಪ್ಪವಾಗಿದೆ.
ಏನಿದು ಗೊಂದಲ?
2022-23ನೇ ಸಾಲಿನ ಅತಿಥಿ ಉಪ ನ್ಯಾಸಕರ ನೇಮಕಾತಿ ಆದೇಶ ಪತ್ರದಲ್ಲಿ ಪರೀಕ್ಷಾ ಕಾರ್ಯಕ್ಕೆ ಕೇವಲ 5 ದಿನ ಮಾತ್ರ ಅವಕಾಶ ನೀಡಿದ್ದು, ಹೆಚ್ಚು ದಿನ ಭಾಗ ವಹಿಸಿ ದ್ದಲ್ಲಿ ಹೆಚ್ಚುವರಿ ದಿನಗಳ ವೇತನ ಹಾಗೂ ಸೇವಾವಧಿ ಕಡಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಈ ಮಧ್ಯೆ ಆದೇಶದಲ್ಲಿ ಇರುವ “ಪರೀಕ್ಷಾ ಕಾರ್ಯ’ ಎಂಬ ಉಲ್ಲೇಖ ಗೊಂದಲ ಸೃಷ್ಟಿಸಿದೆ. ಇದು ಪರೀಕ್ಷಾ ದಿನದ ಕರ್ತವ್ಯ ನಿರ್ವಹಣೆಯೇ ಅಥವಾ ಮೌಲ್ಯಮಾಪನವೇ ಎಂಬ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿಲ್ಲ.
ಸಂಬಳಕ್ಕೆ ಕತ್ತರಿ; ಬಾಕಿ ಗೌರವಧನವೂ ಇಲ್ಲ !
ಈ ಗೊಂದಲದ ನಡುವೆ “ಮೌಲ್ಯ ಮಾಪನ ತುರ್ತು ಕಾರ್ಯ’ ಎಂದು ಅತಿಥಿ ಉಪನ್ಯಾಸಕರು 5 ದಿನಗಳಿ ಗಿಂತಲೂ ಹೆಚ್ಚು ಕಾಲ ಮೌಲ್ಯಮಾಪನದಲ್ಲಿ ತೊಡಗಿಸಿ ಕೊಂಡಿದ್ದರು. ಆದರೆ ಅವರ ಸಂಬಳಕ್ಕೆ ಕತ್ತರಿ ಬೀಳುವ ಆತಂಕ ಎದುರಾಗಿದೆ.
Related Articles
5 ದಿನ ಮಾತ್ರ ಮೌಲ್ಯಮಾಪನಕ್ಕೆ ಭಾಗವಹಿಸುವ ಬಗ್ಗೆ ಸುತ್ತೋಲೆ ವಿ.ವಿ.ಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿಯೇ ತೀರ್ಮಾನ ವಾಗ ಬೇಕಿದೆ.
– ಪ್ರೊ| ರಾಜು ಕೃಷ್ಣ ಚಲನ್ನವರ್, ಕುಲಸಚಿವರು-ಪರೀಕ್ಷಾಂಗ ಮಂಗಳೂರು ವಿ.ವಿ.
- ದಿನೇಶ್ ಇರಾ