Advertisement

ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಪ್ರಸ್ತಾಪಿಸಿ

04:12 PM Dec 12, 2021 | Team Udayavani |

ಕುಷ್ಟಗಿ: ಸೇವಾ ಭದ್ರತೆ, ಹುದ್ದೆ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಡಿ. 10ರಿಂದ ಅತಿಥಿ ಉಪನ್ಯಾಸಕರು, ತರಗತಿ ಬಹಿಷ್ಕರಿಸಿ, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ಅಧಿವೇಶನದ ವೇಳೆ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದ್ದು, ಸದರಿ ಅಧಿವೇಶನದಲ್ಲಿ ಶಾಸಕರು, ಬೇಡಿಕೆಗಳನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಬೇಕೆಂದು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು, ಹಲವು ವರ್ಷಗಳಿಂದ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಲಕಾಲಕ್ಕೆಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಣಕಾಸಿನ ನೆಪವೊಡ್ಡಿ ಭರ್ತಿ ಮಾಡದೇ ಬಿಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ ಸಮಸ್ಯೆಗಳ ನಿವಾರಣೆಗೆ 371 (ಜೆ) ವಿಶೇಷ ಸ್ಥಾನಮಾನ ಜಾರಿಯಲ್ಲಿದ್ದರೂ ಅದು ಅನುಪಾಲನೆಯಾಗುತ್ತಿಲ್ಲ. ಈ ಭಾಗದಲ್ಲಿ ಪ್ರಾಥಮಿಕ ಶಿಕ್ಷಕರ 18ಸಾವಿರ ಹುದ್ದೆ ಖಾಲಿ ಇದ್ದರೂ ಮುಖ್ಯಮಂತ್ರಿಗಳ ಗಮನದಲ್ಲಿದ್ದರೂ ಪ್ರಯೋಜನೆ ಇಲ್ಲ. ಅತಿಥಿ ಉಪನ್ಯಾಸಕ ನೇಮಕಾತಿಯಲ್ಲಿ ಮಾರ್ಗಸೂಚಿ ಅನುಷ್ಠಾನಕ್ಕೆ ಸಿಇಟಿ, ನೆಟ್‌, ಸೆಟ್‌ ಈ ಮೂರನ್ನು ಪರಿಗಣಿಸಿ ನೇಮಿಸಿಕೊಳ್ಳದೇ ಇರುವುದು ದುರದೃಷ್ಟಕರವಾಗಿದ್ದು, ಈ ವಿಷಯದಲ್ಲಿ ಸಾರ್ವಜನಿಕರು ದಂಗೆ ಎದ್ದರೆ ಮಾತ್ರ ಸರ್ಕಾರಕ್ರಮಕ್ಕೆ ಮುಂದಾಗುತ್ತವೆ. ಅಲ್ಲಿಯವರೆಗೂ ಇದೇಪರಿಸ್ಥಿತಿಯಲ್ಲಿರುತ್ತದೆ ಎಂದು ಶಾಸಕ ಬಯ್ನಾಪುರ ಕಳವಳ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಶಂಕರಪ್ಪ ಕಡವಿಬಾವಿ, ಶಂಕರ ಕರಪಡಿ, ಶಿವರಾಜ ಬಂಡಿಹಾಳ, ಭೀಮಣ್ಣ ಸಿ., ಪಕೀರಪ್ಪತಳವಾರ, ಬಸಯ್ಯ ಮಠಪತಿ, ಡಾ| ಐ.ಎನ್‌.ಹುರಳಿ, ವಿಶ್ವನಾಥ ತೊಂಡಿಹಾಳ, ರಾಜಶೇಖರ ಕಲಕಬಂಡಿ, ಶಿವಲೀಲಾ ಸಾಲಿಮಠ, ಮಾಲತಿ ಧರ್ಮಾಯತ್‌, ಮಂಜುನಾಥ, ಪೀರಸಾಬ್‌, ವೈ.ಎನ್‌. ರಾಘವೇಂದ್ರ, ಆರ್‌.ಸಿ. ಲಕ್ಷ್ಮೀ, ಎಚ್‌. ಬಸವರಾಜ್‌ ಕೋನಾಪುರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next