Advertisement
ಕೂಡಲೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ| ಹನುಮಂತ ಕುಲಗೋಡ ಎಚ್ಚರಿಕೆ ನೀಡಿದರು.
ಸರ್ಕಾರ ನಮಗೆ ಸೇವಾ ಭದ್ರತೆ ಕೊಡುವುದಾಗಲಿ, ಕಳೆದ ಹಲವು ತಿಂಗಳಿಂದ ಕೊಡದ ವೇತನ ಕೊಡುವುದಾಗಲಿ ಮಾಡುತ್ತಿಲ್ಲ. ಬದಲಾಗಿ, ಸೇವೆಯಿಂದಲೇ ತೆಗೆಯುವ ಗೊಡ್ಡು ಬೆದರಿಕೆ ಹಾಕಲಾಗುತ್ತಿದೆ. ಇಂತಹ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ರಾಜ್ಯದ 224 ಜನ ಶಾಸಕರೂ ಪ್ರತಿಯೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಅದೇ ಶಾಸಕರ ಒಂದು ತಿಂಗಳ ಪ್ರಯಾಣ ಭತ್ಯೆಗಿಂತ ಕಡಿಮೆ ವೇತನ ಪಡೆಯುವ ಅತಿಥಿ ಉಪನ್ಯಾಸಕರ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಈ ವರೆಗೆ ಒಬ್ಬ ಶಾಸಕರೂ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಅರಿತಿಲ್ಲ. ಅಲ್ಲದೇ ಯಾವುದೇ ಮುಂಜಾಗೃತೆ ಇಲ್ಲದೇ, ಪಠ್ಯಕ್ರಮವೂ ಇಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ-ಬೋಧಕರಿಗೂ ಸಮಸ್ಯೆಯಾಗಿದೆ ಎಂದರು.
ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದೂ°ರ, ಇದು ಕೇವಲ ಅತಿಥಿ ಉಪನ್ಯಾಸಕರ ಸ್ವಾರ್ಥಕ್ಕಾಗಿ ನಡೆದ ಹೋರಾಟವಲ್ಲ. ರಾಜ್ಯದ 7.30 ಲಕ್ಷ ವಿದ್ಯಾರ್ಥಿಗಳ ಭವಿಷ್ಯವೂ ಅಡಗಿದೆ. ಕೇಂದ್ರ ಸರ್ಕಾರದ ಯುಜಿಸಿ ನಿಯಮಾವಳಿ ಪ್ರಕಾರ, ಅತಿಥಿ ಉಪನ್ಯಾಸಕರಿಗೆ ಒಂದು ತರಗತಿಗೆ ರೂ. 1500 ದಂತೆ ವಾರಕ್ಕೆ 8 ತರಗತಿ ಬೋಧನೆಗೆ ನೀಡಿ, ಮಾಸಿಕ 50 ಸಾವಿರ ವೇತನ ಕೊಡಬೇಕು. ಆದರೆ, 11 ಸಾವಿರ ವೇತನ ನೀಡಿ, ತನ್ನದೇ ನಿಯಮವನ್ನೂ ಸರ್ಕಾರ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಕರವೇ ಸಂಪೂರ್ಣ ಬೆಂಬಲ ಕೊಡಲಿದೆ. ಅಲ್ಲದೇ ಸರ್ಕಾರ ಈವರೆಗೆ ರಾಜಕೀಯ ಸಮಾವೇಶ ಮಾಡುವಾಗ ಇಲ್ಲದ ಕೊರೊನಾ ನಿಯಮ ಈಗ ಜಾರಿಗೊಳಿಸಿದೆ. ಇಂತಹ ಪರೋಕ್ಷ ಬೆದರಿಕೆಗೆ ಯಾರೂ ಬಗ್ಗುವುದಿಲ್ಲ ಎಂದರು. ಸಂಘಟನೆಯ ಬಸವರಾಜ ಮನಿಗಾರ, ಕಲಾವತಿ ಗುರವ, ಶಶಿಧರ ಪೂಜಾರಿ, ಚಂದ್ರಶೇಖರ ಕಾಳನ್ನವರ, ಶಶಿಕಲಾ ಜೋಳದ, ಪಾಂಡರಂಗ ಜಾಧವ, ವಿಜಯಕುಮಾರ ಗಂಗಲ, ರಾಜೇಶ್ವರಿಶೀಲವಂತ ಉಪಸ್ಥಿತರಿದ್ದರು.