Advertisement

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ|ಅಶ್ವತ್ಥ ನಾರಾಯಣ

10:01 PM Jan 16, 2022 | Team Udayavani |

ಬೆಂಗಳೂರು: ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಂಬಂಧಿಸಿದ ಸಂಘಟನೆಗಳೊಂದಿಗೆ ಚರ್ಚಿಸಿಯೇ ಪರಿಹರಿಸಲಾಗಿದ್ದು, ಅವರು ಬಯಸಿದ್ದಕ್ಕಿಂತ ಹೆಚ್ಚಿನ ವೇತನವನ್ನು ಘೋಷಿಸಲಾಗಿದೆ. ಆದರೆ ಸೇವಾ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ವೇತನ ಹೆಚ್ಚಳದ ಬಳಿಕವೂ ಅತಿಥಿ ಉಪನ್ಯಾಸಕರು ಮುಷ್ಕರ ಮುಂದುವರಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು. ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಇವರಲ್ಲಿ 4,500 ಮಂದಿ ಮಾತ್ರ ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ.

ಇದನ್ನೂ ಓದಿ:ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಸರಕಾರವು ಇವರ ವೇತನವನ್ನು ಗೌರವಾರ್ಹವಾಗಿ ಹೆಚ್ಚಿಸಬೇಕೆಂದು ಮುಷ್ಕರನಿರತ ಸಂಘಟನಗಳೇ ಹೇಳಿದ್ದವು. ಸರಕಾರ ಇದಕ್ಕೆ ಸ್ಪಂದಿಸಿದ್ದು, ದುಪ್ಪಟ್ಟಿಗಿಂತಲೂ ಹೆಚ್ಚು ವೇತನ ಏರಿಸಿದೆ. ಆದರೂ ಹಠ ತಳೆದಿರುವುದು ಹಾಗೂ ರಾಜಕೀಯ ಬೆರೆಸುತ್ತಿರುವುದು ಬೇಸರದ ಸಂಗತಿ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next