ನವದೆಹಲಿ:2013ರಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಸ್ಕೋ ಕೋರ್ಟ್ ದೋಷಿ ಎಂದು ಆದೇಶ ನೀಡಿದ್ದು, ಜನವರಿ 30ರಂದು ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ತಿಳಿಸಿದೆ.
ನಮ್ಮ ಸಮಾಜ ಪುಟ್ಟ ಹೆಣ್ಣು ಮಕ್ಕಳನ್ನು ಕೆಲವು ಸಮಯದವರೆಗೆ ದೇವತೆ ಎಂದು ಪೂಜಿಸುತ್ತದೆ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆ ಮಗು ಅಸಾಧಾರಣವಾದ ದುಷ್ಟತನಕ್ಕೆ ಒಳಗಾಗಿದ್ದು, ಇದೊಂದು ಅತಿರೇಕದ ಪೈಶಾಚಿಕ ಕೃತ್ಯವಾಗಿದೆ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ.
ಸಂತ್ರಸ್ತೆ ಬಾಲಕಿ ಮೇಲೆ ವಿಕೃತವಾಗಿ ಕೃತ್ಯ ಎಸಗಲಾಗಿದೆ. ಇದು ಇಡೀ ಸಮಾಜವೇ ಅಲುಗಾಡಿಸುವಂತಹ ಘಟನೆಯಾಗಿದ್ದು ಆರೋಪಿಗಳಾದ ಮನೋಜ್ ಶಾ ಮತ್ತು ಪ್ರದೀಪ್ ಕುಮಾರ್ ದೋಷಿ ಎಂದು ಕೋರ್ಟ್ ಆದೇಶ ನೀಡಿದೆ.
ರಾಷ್ಟ್ರರಾಜಧಾನಿಯಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್, ಕೊಲೆ ಪ್ರಕರಣ ನಡೆದ ನಾಲ್ಕು ತಿಂಗಳ ನಂತರ ಈ ಘಟನೆ ನಡೆದಿತ್ತು. ಈ ಬಾಲಕಿಗೆ ಮಾಧ್ಯಮಗಳು ಗುಡಿಯಾ ಎಂದು ಹೆಸರಿಟ್ಟಿದ್ದವು.
ಅಪಹರಣಕ್ಕೊಳಗಾಗಿ ಅತ್ಯಾಚಾರಕ್ಕೊಳಗಾಗಿದ್ದ ಮಗು ನಾಪತ್ತೆಯಾಗಿತ್ತು. ನಂತರ ಪೊಲೀಸರು ಪೋಷಕರ ಬಳಿ ಮಗುವನ್ನು ಪತ್ತೆ ಹಚ್ಚಿ ಎಂದು ತಿಳಿಸಿದ್ದರು. ಎರಡು ದಿನದ ನಂತರ ಪೂರ್ವ ದಿಲ್ಲಿಯ ಮನೆಯೊಂದರ ಕೆಳ ಅಂತಸ್ತಿನಲ್ಲಿ ಮಗು ಪತ್ತೆಯಾಗಿತ್ತು. ಆರೋಪಿಗಳು ಆ ಮಗುವಿನ ಗುಪ್ತಾಂಗದೊಳಕ್ಕೆ ಕ್ಯಾಂಡಲ್ ಮತ್ತು ಬಾಟಲಿಯನ್ನು ತುರುಕಿರುವುದಾಗಿ ವರದಿ ವಿವರಿಸಿದೆ.
ಮಗುವಿನ ಮೇಲೆ ಅತ್ಯಾಚಾರ ಪೈಶಾಚಿಕವಾಗಿ ಅತ್ಯಾಚಾರ ಎಸಗಿ ಆರೋಪಿಗಳು ಓಡಿ ಹೋಗಿದ್ದರು. ಮಗು ಸಾವನ್ನಪ್ಪಿದೆ ಎಂದು ಭಾವಿಸಿ ಮನೋಜ್ ಮತ್ತು ಪ್ರದೀಪ್ ಪರಾರಿಯಾಗಿದ್ದರೆಂದು ವರದಿ ವಿವರಿಸಿದೆ. 40 ಗಂಟೆಗಳ ಬಳಿಕ ಮಗುವನ್ನು ರಕ್ಷಿಸಲಾಗಿತ್ತು.