Advertisement

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

05:46 PM Nov 29, 2024 | Team Udayavani |

ಗಂಗಾವತಿ: ಕಳೆದ 30 ವರ್ಷಗಳಿಂದ ಗಂಗಾವತಿ ಸೇರಿ ರಾಜ್ಯದ ಬಹುತೇಕ ನಗರ ಪ್ರದೇಶಗಳಲ್ಲಿ ಅನಧಿಕೃತ ಲೇಔಟ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸದೇ ಸಾರ್ವಜನಿಕರು ವ್ಯವಸ್ಥೆ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದು ರಾಜ್ಯ ಸರಕಾರ ಕೂಡಲೇ ರಾಜ್ಯದಲ್ಲಿರುವ ಅನಧಿಕೃತ ಲೇಔಟ್‌ಗಳನ್ನು ದಂಡ ಸಮೇತ ಸಕ್ರಮಗೊಳಿಸಿ ಗ್ಯಾರಂಟಿ ಯೋಜನೆಗಳಿಂದ ಖಾಲಿಯಾಗಿರುವ ಖಜಾನೆ ತುಂಬಿಸಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಿ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಸಲಹೆ ನೀಡಿದರು.

Advertisement

ಅವರು ನಗರದ ರಾಣಾ ಪ್ರತಾಪಸಿಂಗ್ ವೃತ್ತದ ಬಳಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಫಾರಂ 3 ವಿತರಣೆಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಗಂಗಾವತಿಯಲ್ಲಿ 30 ಸಾವಿರ ಆಸ್ತಿಗಳು ನಗರಸಭೆಯಲ್ಲಿ ನೋಂದಣಿಯಾಗಿದ್ದು ಇವುಗಳಲ್ಲಿ ಅರ್ಧಕರ್ಧ ಆಸ್ತಿಗಳಿಗೆ ಫಾರಂ 3 ದಾಖಲೆ ಇಲ್ಲದೇ ಈ ಕುರಿತು ಪೌರಾಯುಕ್ತರಿಗೆ ಹಲವು ಭಾರಿ ಸೂಚನೆಯ ಹಿನ್ನೆಲೆಯಲ್ಲಿ ವಿಶೇಷ ಶಿಬಿರದ ಮೂಲಕ ಈಗಾಗಲೇ 12 ನೂರು ಫಾರಂ 3 ದಾಖಲೆಗಳನ್ನು ವಿತರಿಸಲಾಗಿದ್ದು ಇದರಿಂದ 10 ಲಕ್ಷ ಕ್ಕೂ ಹೆಚ್ಚು ತೆರಿಗೆ ಆದಾಯ ಸಂಗ್ರಹವಾಗಿದೆ.

ರಾಜ್ಯ ಸರಕಾರ ಹಣಕಾಸು ತೊಂದರೆಯಾಗಿದ್ದು ಅನಧಿಕೃತ ಲೇಔಟ್‌ಗಳನ್ನು ಅಧಿಕೃತ ಮಾಡುವ ಮೂಲಕ ದಂಡ ಸಂಗ್ರಹ ಮಾಡಿ ಖಜಾನೆ ತುಂಬಿಸಬಹುದಾಗಿದೆ. ಕಳೆದ ಸರಕಾರದ ಅವಧಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಅನಧಿಕೃತ ಲೇಔಟ್ ಸಕ್ರಮ ಮಾಡುವಂತಹ ಬಿಲ್ ಮಂಡನೆಯಾಗಿದ್ದು ಬಿಲ್ ಚರ್ಚೆಯಾಗಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಸರಕಾರದ ಗಮನ ಸೆಳೆಯಲಾಗುತ್ತದೆ. ಇದರಿಂದ ಮೂಲಸೌಕರ್ಯ ವಂಚಿತ ನಗರ ಪ್ರದೇಶದ ಅನಧಿಕೃತ ಲೇಔಟ್‌ಗಳಲ್ಲಿ ವಾಸಿಸುವ ಜನರಿಗೆ ಅನುಕೂಲವಾಗುತ್ತದೆ. ಗಂಗಾವತಿ ನಗರಸಭೆ ಅಧ್ಯಕ್ಷರು ಪೌರಾಯುಕ್ತರು ಅತ್ಯುತ್ತಮವಾಗಿ ಕಾರ್ಯ ಮಾಡಿದ್ದು ನ.25 ರಿಂದ ಡಿ.05 ವರೆಗೆ ಫಾರಂ 3 ವಿತರಣೆಯ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ನಗರದ ರಸ್ತೆ, ಚರಂಡಿ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಶೀಘ್ರ ಜಾರಿ ಆಗಲಿದೆ. ವಾರ್ಡುಗಳಲ್ಲಿ ರಸ್ತೆ ಹಾಗೂ ಗೌಳಿ ಮಹಾದೇವಪ್ಪ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಯೂ ಶೀಘ್ರ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ರೆಡ್ಡಿಯವರ ಆಪ್ತರಾದ ಅಲಿಖಾನ್, ನಗರಸಭೆ ಅಧ್ಯಕ್ಷ ಮೌಲಸಾಬ, ಉಪಾಧ್ಯಕ್ಷೆ ಪಾರ್ವತಮ್ಮ,ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ನೀಲಕಂಠಪ್ಪ,ಉಮೇಶ, ಪರಶುರಾಮ ಮಡ್ಡೇರ್,ಉಮೇಶ ಸಿಂಗನಾಳ,ಶರಭೋಜಿ ರಾವ್,ಮಹಮದ್ ಉಸ್ಮಾನ್,ಅಬ್ದುಲ್ ಜಬ್ಬಾರ್ ಸತ್ತರಸಾಬ್,ನವೀನಕುಮಾರ ಪಾಟೀಲ್ ಮುಖಂಡರಾದ ಮನೋಹರಗೌಡ, ವಿರೂಪಾಕ್ಷಗೌಡ ನಾಯಕ. ಪಂಪಣ್ಣ ನಾಯಕ,ಡಿ.ಕೆ.ಆಗೋಲಿ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next