Advertisement

ಉದ್ಯೋಗಗಳನ್ನು ಕಸಿಯುವ ಜಿಪಿಟಿ 4!

02:35 AM Mar 17, 2023 | Team Udayavani |

ವಾಷಿಂಗ್ಟನ್‌: ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌-ಎಐ) ಬಳಕೆ ಹೆಚ್ಚುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಚಾಟ್‌ಜಿಪಿಟಿ ಹೊಸ ವರ್ಷನ್‌ ಚಾಟ್‌ಬೊಟ್‌-ಜಿಪಿಟಿ 4 ಸಮ್ಮೊàಹಕಗೊಳಿಸುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಹೆಚ್ಚು ಶಕ್ತಿಯುತವಾಗಿದೆ.

Advertisement

“ಜಿಪಿಟಿ 4 ಮಾನವ ಮೌಲ್ಯಗಳೊಂದಿಗೆ ಹೆಚ್ಚು ಸಮೀಕರಣಗೊಳ್ಳುತ್ತದೆ ಮತ್ತು ಅತ್ಯಂತ ಸಮರ್ಥವಾಗಿದೆ,’ ಎಂದು ಓಪನ್‌ಎಐ ಸಿಇಒ ಸ್ಯಾಮ್‌ ಆಲ್ಟ್ಮ್ಯಾನ್‌ ವಿಶ್ಲೇಷಿದ್ದಾರೆ. ಉಪಯೋಗಗಳ ಜತೆಗೆ ಇದು ಮಾನವರ ಉದ್ಯೋಗ ಕಸಿಯಲಿದೆ ಎಂಬ ಆತಂಕ ಎದುರಾಗಿದೆ.

ಜಿಪಿಟಿ 4 ಕೇವಲ ಉತ್ತರಗಳನ್ನಷ್ಟೇ ನೀಡುವುದಿಲ್ಲ, ಪ್ರಶ್ನೆಗಳನ್ನು ಸಹ ಕೇಳುತ್ತದೆ. ಚಾಟ್‌ಬೊಟ್‌ ಪ್ರಕಾರವೇ, 20 ಉದ್ಯೋಗಳನ್ನು ಎಐ ನಿಂದ ಬದಲಾಯಿಸ ಬಹುದಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕ ಸೇವಾ ಪ್ರತಿನಿಧಿ, ಪ್ರೂಫ್ ರೀಡರ್‌, ಟ್ರಾನ್ಸ್‌ ಲೇಟರ್‌, ಕಾಪಿರೈಟರ್‌, ಸುದ್ದಿ ವರದಿಗಾರ, ಟ್ರಾವೆಲ್‌ ಏಜೆಂಟ್‌, ಮಾರ್ಕೆಟಿಂಗ್‌ ರಿಸರ್ಚ್‌ ಅನಾಲಿಸ್ಟ್‌, ಇಂಗ್ಲಿಷ್‌ ಭಾಷೆ ಶಿಕ್ಷಕರು, ಟೆಲಿ ಮಾರ್ಕೆಟರ್‌ ಸಹಿತ ಒಟ್ಟು 20 ರೀತಿಯ ಉದ್ಯೋಗಳನ್ನು ಜಿಪಿಟಿ 4 ಕಸಿಯಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next