Advertisement
ರಾಷ್ಟ್ರವ್ಯಾಪಿ ಜಾರಿಗೆ ತರಲು ಉದ್ದೇಶಿಸಲಾಗಿರುವ ಏಕರೂಪದ ಜಿಎಸ್‌ಟಿ ತೆರಿಗೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ವರ್ತಕ ಸಮುದಾಯ ಹಾಗೂ ಸಾರ್ವಜ ನಿಕರಿಗೆ ಮಾಹಿತಿಯನ್ನು ಒದಗಿಸುವ ಜಿಎಸ್‌ಟಿ ತೆರಿಗೆ ವಿಚಾರ ಸಂಕಿರಣ ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆಯಿತು.
Related Articles
Advertisement
ನೂತನ ತೆರಿಗೆ ಪದ್ಧತಿಯನ್ನು ಯಶಸ್ವಿಗೊಳಿಸಲು ತೆರಿಗೆ ಪಾವತಿದಾರರಿಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಎಂ. ವಿನೋದ್ ಕುಮಾರ್ ತಿಳಿಸಿದರು.
ತೆರಿಗೆ ಇಲಾಖಾ ಅಧಿಕಾರಿ ವೆಂಕಟೇಶ್ ಮಾತನಾಡಿ, ಅನೇಕ ವಿಧದ ತೆರಿಗೆಗಳು ಜನ ಸಾಮಾನ್ಯರಿಗೆ ಕ್ಲಿಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತಿತ್ತು. ಇದೀಗ ಜಾರಿಗೆ ಬಂದಿರುವ ಜಿಎಸ್‌ಟಿ ಏಕರೂಪದ ತೆರಿಗೆ ಪದ್ಧತಿ ಹೆಚ್ಚು ಅನುಕೂಲವನ್ನು ಕಲ್ಪಿಸಲಿದೆ ಎಂದರು.
ಉತ್ಪಾದನೆ ಮತ್ತು ಮಾರಾಟವನ್ನು ಹೊರತು ಪಡಿಸಿದಂತೆ ಸರಬರಾಜಿಗೆ ಮಾತ್ರ ತೆರಿಗೆ ಸೀಮಿತವಾಗಿರಲಿದೆ. ಕೇಂದ್ರದ ಹಣಕಾಸು ಸಚಿವ
ಅರುಣ್ ಜೇಟಿ ನೇತೃತ್ವದಲ್ಲಿ 29 ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುವ ಜಿಎಸ್‌ಟಿ ಕೌನ್ಸಿಲ್ ಈ ನೂತನ ತೆರಿಗೆ ಪದ್ಧತಿಯನ್ನು ಕ್ರಮ ಬದ್ಧವಾಗಿ ಜಾರಿಗೆ ತರುವ ನಿರ್ಧಾರವನ್ನು ಕೈಗೊಳ್ಳಲಿದೆ. ಪ್ರಸ್ತುತ ವ್ಯಾಟ್, ಸರ್ವೀಸ್ ಟ್ಯಾಕ್ಸ್, ಸೇಲ್ಸ್ ಟ್ಯಾಕ್ಸ್ ಮೊದಲಾದ ತೆರಿಗೆಗಳಿವೆ. ಮುಂಬರುವ ದಿನಗಳಲ್ಲಿ ಇವೆಲ್ಲವು ಜಿಎಸ್‌ಟಿ ಮೂಲಕ ಏಕ ರೂಪದ ತೆರಿಗೆಯಾಗಿ ಮಾರ್ಪಡಲಿದೆ ಎಂದರು.
ಪ್ರಸ್ತುತ ಚಾಲ್ತಿಯಲ್ಲಿರುವ ರಾಜ್ಯ ಮತ್ತು ಕೇಂದ್ರದ ವಿವಿಧ ತೆರಿಗೆಗಳು ಜಿಎಸ್‌ಟಿ ಮೂಲಕ ಏಕ ರೂಪದ ತೆರಿಗೆಯಾಗಿ ಮಾರ್ಪಟ್ಟಿದೆ. ಇದರಿಂದ ಸರಕು ಸಾಗಣೆ ಮತ್ತು ಮಾರಾಟದ ಸಂದರ್ಭ ತೆರಿಗೆ ಬೀಳುವ ಸಂಕಷ್ಟ ದೂರವಾಗಲಿದೆ.
ರಾಷ್ಟ್ರವ್ಯಾಪಿ ಜಿಎಸ್‌ಟಿ ತೆರಿಗೆ ಏಕರೂಪ ದ್ದಾಗಿರುತ್ತದೆ ಮತ್ತು ಯಾವುದೇ ಸರಕಿಗೆ ತೆರಿಗೆಯಿಂದ ವಿನಾಯಿತಿ ಇದ್ದುದೇ ಆದಲ್ಲಿ ಅದು ಇಡೀ ರಾಷ್ಟ್ರಕ್ಕೆ ಅನ್ವಯವಾಗುವುದರಿಂದ ವರ್ತಕ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿನೋದ್ ಕುಮಾರ್ ತಿಳಿಸಿದರು.
ಜಿಎಸ್‌ಟಿ ತೆರಿಗೆ ಪದ್ಧತಿಯಡಿ ಪ್ರತಿಯೊಂದು ಸರಕಿಗೂ ಪ್ರತ್ಯೇಕವಾದ ಕೋಡ್ ನೀಡಲಾಗುತ್ತದೆ ಎಂದು ತಿಳಿಸಿದ ವೆಂಕಟೇಶ್, ಜಿಎಸ್‌ಟಿ ಪದ್ಧತಿಯಡಿ ಎಲ್ಲ ರಾಜ್ಯಗಳಲ್ಲಿ ತೆರಿಗೆ ಏಕರೂಪದಲ್ಲಿ ಇರುವಂತೆ ನೋಡಿಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದರು.
ಸ್ಥಾನೀಯ ಸಮಿತಿ ಸಂಘಟನೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎಸ್. ಪ್ರಕಾಶ್ ಮಾತನಾಡಿ, ಸಂಸ್ಥೆಯ ಸ್ಥಾನೀಯ ಸಮಿತಿಗಳನ್ನು ಮತ್ತಷ್ಟು ಸಂಘಟಿಸುವ ಮೂಲಕ ಜಿಎಸ್‌ಟಿ ಪದ್ಧತಿ ಕುರಿತು ಜಾಗೃತಿ ಮೂಡಿಸಿ ಹೊಸ ತೆರಿಗೆ ನೀತಿಯನ್ನು ಜಿಲ್ಲೆಯಲ್ಲಿ ಯಶಸ್ವಿ ಗೊಳಿಸಲಾಗುವುದೆಂದು ತಿಳಿಸಿದರು. ಸೆಂಟ್ರಲ್ ಎಕ್ಸೆçಸ್‌ನ ಜೋನಲ್ ಕಮೀಷನರ್ ರಾಜ್ ಕುಮಾರ್, ಕಸ್ಟಮ್ಸ್‌ನ ಕಮಿಷನರ್ ರಾಜೀವ್ ತಿವಾರಿ, ಸೆಂಟ್ರಲ್ ಎಕ್ಸೆ„ಸ್‌ನ ಕಮಿಷನರ್ ಜಿ.ವಿ. ಕೃಷ್ಣರಾವ್ ಪಾಲ್ಗೊಂಡು ಜಿಎಸ್‌ಟಿ ಕುರಿತು ಸಮಗ್ರ ಮಾಹಿತಿ ನೀಡಿದರು.