Advertisement

ಜಿಎಸ್‌ಟಿ ಕಡಿತ:ಮನೆ ಖರೀದಿದಾರರಿಗೆ ಕೇಂದ್ರದ ಕೊಡುಗೆ

12:30 AM Feb 25, 2019 | Team Udayavani |

ಹೊಸದಿಲ್ಲಿ: ಮನೆ ಖರೀದಿದಾರರಿಗೆ ಭಾರೀ ಪ್ರಮಾಣದ ಕೊಡುಗೆಯನ್ನು ಘೋಷಿಸಿರುವ ಕೇಂದ್ರ ಸರಕಾರ, ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ಶೇ. 12 ಇದ್ದ ಜಿಎಸ್‌ಟಿಯನ್ನು ಶೇ. 5ಕ್ಕೆ ಇಳಿಕೆ ಮಾಡಿದೆ. ಅಲ್ಲದೆ ಕಡಿಮೆ ಬೆಲೆಯ ಮನೆಗಳ ಮೇಲೆ ಈಗ ವಿಧಿಸಲಾಗುತ್ತಿರುವ ಶೇ. 8ರ ಜಿಎಸ್‌ಟಿಯನ್ನು ಶೇ.1ಕ್ಕೆ ಇಳಿಸಲಾಗಿದೆ. ಇದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರ ಮನೆಯ ಕನಸಿಗೆ ಪೂರಕವಾಗಿದೆ.

Advertisement

ಹೊಸ ತೆರಿಗೆ ವಿಧಾನ 2019ರ ಎಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಸದ್ಯ, ನಿರ್ಮಾಣ ಹಂತದಲ್ಲಿರುವ ಅಥವಾ ವಾಸಕ್ಕೆ ಸಿದ್ಧ ವಿದ್ದರೂ ಪೂರ್ಣತೆ ಪ್ರಮಾಣ ಪತ್ರ ವನ್ನು ಪಡೆಯದ ಫ್ಲಾ  éಟ್‌ಗಳ ಖರೀದಿಗೆ ಶೇ. 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಹೊಸ ಜಿಎಸ್‌ಟಿ ನೀತಿಯ ಪ್ರಕಾರ ಬಿಲ್ಡರ್‌ಗಳು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆ ಯಲು ಸಾಧ್ಯ ವಾಗುವುದಿಲ್ಲ. ಈ ಹಿಂದೆ ಶೇ. 12ರಷ್ಟು ಜಿಎಸ್‌ಟಿ ಯನ್ನೂ ಮನೆ ಖರೀದಿದಾರರಿಂದ ಬಿಲ್ಡರ್‌ಗಳು ಪಡೆಯು ತ್ತಾರೆ. ಸರಕಾರದಿಂದ ಲಭ್ಯವಾಗುವ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನ ಲಾಭವನ್ನು ಮನೆ ಖರೀದಿದಾರರಿಗೆ ಬಿಲ್ಡರ್‌ಗಳು ವರ್ಗಾವಣೆ ಮಾಡುವುದಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಯಲ್ಲಿ ಈ ಕ್ರಮ ಅತ್ಯಂತ ಗಮನಾರ್ಹವಾಗಿದೆ.

ರವಿವಾರ ಸಭೆ ಸೇರಿದ ಜಿಎಸ್‌ಟಿ ಮಂಡಳಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ವಿವರಗಳನ್ನು ಸಚಿವ ಅರುಣ್‌ ಜೇಟ್ಲಿ ವಿವರಿಸಿದ್ದಾರೆ. 45 ಲಕ್ಷ ರೂ. ವೆಚ್ಚದ ಮತ್ತು ಮೆಟ್ರೋ ನಗರಗಳಲ್ಲಿ 60 ಚದರ ಮೀಟರ್‌ ಹಾಗೂ ಮೆಟ್ರೋ ಹೊರತಾದ ನಗರಗಳಲ್ಲಿ 90 ಚದರ ಮೀಟರ್‌ ಮನೆಗಳನ್ನು ಕಡಿಮೆ ವೆಚ್ಚದ ಮನೆ ಎಂದು ಪರಿಗಣಿಸಲಾಗಿದ್ದು, ಈ ಮನೆ ನಿರ್ಮಾಣದ ಮೇಲೆ ಶೇ.1 ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next