ಹೈದರಾಬಾದ್ : ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ವಹಿವಾಟಿನಲ್ಲಿ ತೊಡಗಿಕೊಂಡಿರುವ ಎಂಟು ಕಂಪೆನಿಗಳ ಸಮೂಹವೊಂದು 224 ಕೋಟಿ ರೂ.ಗಳ ತೆರಿಗೆ ವಂಚನೆ ಎಸಗಿರುವುದನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಂತೆಯೇ 1,289 ಕೋಟಿ ರೂ. ಮೌಲ್ಯದ ನಕಲಿ ಇನ್‌ವಾಯ್‌ಸ್ ಗಳನ್ನು ವಶಡಿಸಿಕೊಂಡಿದ್ದಾರೆ.
ಈ ಜಿಎಸ್‌ಟಿ ವಂಚನೆ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಆತನದಿಂದ 19.75 ಕೋಟಿ ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದ್ ಸೆಂಟ್ರಲ್ ಜಿಎಸ್‌ಟಿ ಕಮಿಷನರೇಟ್ ಈ ಬೃಹತ್ ಮೊತ್ತದ ಜಿಎಸ್‌ಟಿ ತೆರಿಗೆ ವಂಚನೆಯನ್ನು ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಈ ವಂಚಕ ಕಂಪೆನಿಗಳ ಉನ್ನತರ ನಿವಾಸ ಮತ್ತು ಕಾರ್ಯಾಲಯಗಳ ಮೇಲೆ ವ್ಯಾಪಕ ದಾಳಿ ನಡೆಸಲಾಗಿದದ್ದು ಅನೇಕ ನಕಲಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017ರ ಜುಲೈ ತಿಂಗಳಿಂದ ಈ ಭಾರೀ ವಂಚನೆ ಜಾಲ ಕಾರ್ಯವೆಸಗುತ್ತಿತ್ತು ಎಂದವರು ಹೇಳಿದ್ದಾರೆ.
ಈ ಕಂಪೆನಿಗಳ ಆವರ್ತನೆಯ ಫೇಕ್ ವಹಿವಾಟು ದಾಖಲೆಪತ್ರಗಳನ್ನು ತೋರಿಸಿ ತಮ್ಮ ವಹಿವಾಟನ್ನು ದೊಡ್ಡ ಮೊತ್ತದಲ್ಲಿ ತೋರಿಸುತ್ತಿದ್ದವು ಎಂದು ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.