Advertisement

ಜಿಎಸ್ ಟಿ ಹಾಕಿದರೂ ವಸ್ತುಗಳ ದರ ಹೆಚ್ಚಳ ಮಾಡುವ ಅವಶ್ಯಕತೆಯಿಲ್ಲ: ಸಿಎಂ ಬೊಮ್ಮಾಯಿ

11:33 AM Jul 18, 2022 | Team Udayavani |

ಬೆಂಗಳೂರು: ನಾವು ಹಾಲು,‌ ಮೊಸರನ್ನು ಪ್ಯಾಕ್ ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಜಿಎಸ್ ಟಿ ಹಾಕಿದ್ದೇವೆ. ಸಾಮಾನ್ಯವಾಗಿ ಮಾರಾಟ ಮಾಡುವವರಿಗೆ ಹಾಕಿಲ್ಲ. ಬ್ರಾಂಡೆಡ್ ಇದ್ದವರಿಗೆ ಮಾತ್ರ 5% ಜಿಎಸ್ ಟಿ ಹಾಕಿದ್ದೇವೆ. ಅದನ್ನು ಮರು ಪಾವತಿ ಮಾಡಲು ಅವಕಾಶವಿದೆ‌. ಹೀಗಾಗಿ ಜಿಎಸ್ ಟಿ ಇದ್ದರೂ ವಸ್ತುಗಳ ದರ ಹೆಚ್ಚಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮರುಪಾವತಿ ಮಾಡುವ ಸಾಧ್ಯತೆಯಿದೆ. ಇದನ್ನು ಮಾಡದಿದ್ದರೇ ಟ್ಯಾಕ್ಸ್ ಗ್ರಾಹಕರಿಗೆ ಬೀಳುತ್ತಿತ್ತು. ಇದನ್ನು ಮರುಪಾವತಿ ಮಾಡಿದರೆ ಈಗಿರುವ ದರ ಹೆಚ್ಚಳವಾಗಲ್ಲ. ಇದರ ಬಗ್ಗೆ ನಾವು ಗಮನ ಕೊಡುತ್ತೇವೆ. ಮರುಪಾವತಿ ಮಾಡುವ ಅವಕಾಶ ಪಡೆದುಕೊಳ್ಳಬೇಕು. ಇದನ್ನು ಜಿಎಸ್ ಟಿ ಕೌನ್ಸಿಲ್ ನಲ್ಲಿ ಮಾತಾಡುತ್ತೇವೆ ಎಂದರು.

ಇದನ್ನೂ ಓದಿ:ನಾವು ಬದಲಾಗುವುದು ಯಾವಾಗ? ಸುಧಾರಣೆಗಳು ಎಂದು?: ಸಿನಿಮಾ ಉದಾಹರಣೆ ನೀಡಿದ ಎಚ್ ಡಿಕೆ

ಜಿಎಸ್ ಟಿ ಕಾರಣದಿಂದ ದರ ಹೆಚ್ಚಳ‌ ಮಾಡಿದ್ದಾರೆ, ಆದರೆ ಹೆಚ್ಚಳ ಮಾಡುವ ಅವಶ್ಯಕತೆಯಿಲ್ಲ. 5% ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದನ್ನು ಜಿಎಸ್ ಟಿ ಕೌನ್ಸಿಲ್ ಮೂಲಕ ನಿರ್ದೇಶನ ಕೊಡಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next