Advertisement

ಮತ್ತಷ್ಟು ವಸ್ತುಗಳ ಜಿಎಸ್‌ಟಿ ಹೆಚ್ಚಳ? ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿಯ ಪರಾಮರ್ಶೆ

10:39 PM Aug 16, 2022 | Team Udayavani |

ನವದೆಹಲಿ:ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿ ಇನ್ನೂ ಹಲವು ವಸ್ತುಗಳಿಗೆ ನೀಡಲಾಗಿರುವ ಜಿಎಸ್‌ಟಿ ವಿನಾಯಿತಿ ವಾಪಸ್‌ ಪಡೆಯುವಂತೆ ಸಲಹೆ ನೀಡುವ ಹಾಗೂ ಮತ್ತಷ್ಟು ಉತ್ಪನ್ನಗಳ ಜಿಎಸ್‌ಟಿಯನ್ನು ಹೆಚ್ಚಳ ಮಾಡುವ ಸಾಧ್ಯತೆಗಳು ಇವೆ.

Advertisement

ಇನ್‌ವರ್ಟೆಡ್‌ ಡ್ನೂಟಿ(ಕಚ್ಚಾ ವಸ್ತುಗಳ ತೆರಿಗೆಯು ಸಿದ್ಧವಸ್ತುಗಳ ತೆರಿಗೆಗಿಂತ ಹೆಚ್ಚಳವಾಗಿರುವುದು) ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲವು ಉತ್ಪನ್ನಗಳ ಜಿಎಸ್‌ಟಿ ಹೆಚ್ಚಳ ಮತ್ತು ಇನ್ನು ಕೆಲವು ಸರಕುಗಳ ವಿನಾಯ್ತಿ ರದ್ದು ಮಾಡುವ ಬಗ್ಗೆ ಸಚಿವರ ಸಮಿತಿ ಚರ್ಚಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಪರಿಷ್ಕರಣೆಯಾಗಲಿರುವ ಎರಡನೇ ಹಂತದ ವಸ್ತುಗಳ ಪಟ್ಟಿಯನ್ನು ಸಮಿತಿ ಸಿದ್ಧಪಡಿಸುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅದನ್ನು ಚರ್ಚಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆದಿದ್ದ 2 ಸಭೆಗಳು ಫ‌ಲಪ್ರದವಾಗಿದ್ದವು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ವಿದ್ಯುತ್‌ ವಾಹನಗಳ ಕ್ಷೇತ್ರ ಸೇರಿದಂತೆ ಇರುವ ಅಟೊಮೊಬೈಲ್‌ ಉದ್ದಿಮೆ, ಕೆಲವೊಂದು ಇಲೆಕ್ಟ್ರಾನಿಕ್ಸ್‌ ವಸ್ತುಗಳು, ಯೂರಿಯಾ ಸೇರಿದಂತೆ ರಸಗೊಬ್ಬರ ಉತ್ಪಾದನೆ ಮಾಡುವ ವಸ್ತುಗಳಿಗೆ ಇನ್‌ವರ್ಟೆಡ್‌ ಡ್ನೂಟಿ ಸಮಸ್ಯೆ ಎದುರಾಗುತ್ತಿದೆ.

ಬಿಲ್‌ ತೋರಿಸಿ, ನಗದು ಬಹುಮಾನ ಗೆಲ್ಲಿ!
ತಿರುವನಂತಪುರಂ: ಜಿಎಸ್‌ಟಿ ತಪ್ಪಿಸಿಕೊಳ್ಳುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇರಳ ಸರ್ಕಾರ ವಿನೂತನ ಯೋಜನೆಯೊಂದನ್ನು ಘೋಷಿಸಿದೆ. ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು “ಲಕ್ಕಿ ಬಿಲ್‌ ಆ್ಯಪ್‌’ ಎಂಬ ಹೊಸ ಆ್ಯಪ್‌ವೊಂದನ್ನು ಅನಾವರಣಗೊಳಿಸಿದ್ದಾರೆ. ಯಾರು ತಾವು ಖರೀದಿಸಿದ ವಸ್ತುಗಳ ನೈಜ ಬಿಲ್‌ ಅನ್ನು ಈ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುತ್ತಾರೋ ಅವರಿಗೆ 25 ಲಕ್ಷ ರೂ. ನಗದು ಸೇರಿದಂತೆ ವಿವಿಧ ಬಹುಮಾನಗಳನ್ನು ನೀಡುವುದಾಗಿಯೂ ಅವರು ಘೋಷಿಸಿದ್ದಾರೆ.

Advertisement

ಪ್ರತಿಯೊಬ್ಬ ವ್ಯಕ್ತಿಯೂ, ಯಾವುದೇ ವಸ್ತುವನ್ನು ಖರೀದಿಸಿದರೂ ಅದಕ್ಕೆ ಬಿಲ್‌ ನೀಡುವಂತೆ ಮಾರಾಟಗಾರನಲ್ಲಿ ಕೇಳಬೇಕು. ಆಗ ಮಾರಾಟಗಾರರು ತೆರಿಗೆ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ಸರ್ಕಾರದ ವಾದ. ಈ ಬಹುಮಾನಕ್ಕೆಂದೇ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಟ್ಟಿರುವುದಾಗಿಯೂ ಸಿಎಂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next