ಹೊಸದಿಲ್ಲಿ: ದೇಶದ ಹಲವೆಡೆ ಜಿಎಸ್‌ಟಿ ನಕಲಿ ಇನ್‌ವಾಯ್ಸ ಹಗರಣವನ್ನು ಪತ್ತೆಹಚ್ಚಿರುವ ಜಿಎಸ್ಟಿ ಗುಪ್ತಚರ ಮಹಾನಿರ್ದೇಶನಾಲಯ(ಡಿಜಿಜಿಐ) ಕಳೆದ 2 ತಿಂಗಳುಗಳಲ್ಲಿ ಬರೋಬ್ಬರಿ 700 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದು, 215 ಮಂದಿಯನ್ನು ಬಂಧಿಸಿದೆ. ಅಲ್ಲದೆ 6,600ರಷ್ಟು ನಕಲಿ ಜಿಎಸ್ಟಿ ಐಡಿ ನಂಬರ್‌ಗಳನ್ನು ಪತ್ತೆಹಚ್ಚಿ, 2,200 ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಬಂಧಿತರಲ್ಲಿ ಕೇವಲ ನಕಲಿ ಸಂಸ್ಥೆಗಳ ಆಪರೇಟರ್‌ಗಳು ಮಾತ್ರವಲ್ಲದೇ ಕಮಿಷನ್ ಆಧಾರದಲ್ಲಿ ನಕಲಿ ಇನ್‌ವಾಯ್ಸ ಬ್ಯುಸಿನೆಸ್ ನಡೆಸು ತ್ತಿದ್ದ ವಂಚಕರು ಕೂಡ ಸೇರಿದ್ದಾರೆ. ಬಂಧಿತ 215 ಮಂದಿಯ ಪೈಕಿ, 71 ಮಂದಿ ಮಾಸ್ಟರ್‌ವೆುçಂಡ್‌ಗಳೂ ಇದ್ದಾರೆ. ಈವರೆಗೆ ಅತಿ ಹೆಚ್ಚು ಅಂದರೆ 23 ಮಂದಿ ಮುಂಬಯಿ ವಲಯದಲ್ಲೇ ಬಂಧನಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ.
ವಿತ್ತೀಯ ಕೊರತೆ ಶೇ. 7.5ಕ್ಕೆ ಏರಿಕೆ?
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ. 7.5ಕ್ಕೆ ಏರುವ ನಿರೀಕ್ಷೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ. 3.5ರಷ್ಟು ಇರಬಹುದು ಎಂದು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿತ್ತು. ಆದರೆ ತಜ್ಞರು ಶೇ. 7.5ರ ಕೊರತೆಯನ್ನು ನಿರೀಕ್ಷಿಸಿದ್ದಾರೆ.
ವಿತ್ತೀಯ ಕೊರತೆಯು ಜಿಡಿಪಿಯ 7.96 ಲಕ್ಷ ಕೋಟಿಗಳಷ್ಟು ( ಶೇ. 3.5) ಇರಲಿದೆ ಎಂದು 2020-21ರ ಬಜೆಟ್‌ನಲ್ಲಿ ಅಂದಾಜು ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಿಂದ ಸಾಲ ಪಡೆಯುವ ಮೊತ್ತವನ್ನು 7.80 ಲಕ್ಷ ಕೋಟಿಗೆ ನಿಗದಿ ಮಾಡಲಾಗಿತ್ತು. ಆದರೆ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಅದನ್ನು 12 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗಿದೆ.