Advertisement

ಜಾನುವಾರು ಸಾಗಾಟಕ್ಕೆ ಜಿಎಸ್‌ಟಿ? ಸರಕಾರದಿಂದ ಕರಡು ನಿಯಮ ಪ್ರಕಟ

12:06 AM Nov 05, 2022 | Team Udayavani |

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಪ್ರಕಾರ ಜಾನುವಾರುಗಳ ಸಾಗಾಟಕ್ಕೆ ಜಿಎಸ್‌ಟಿ ಅನ್ವಯವಾಗಲಿದ್ದು, ಅದನ್ನು ಜಾನುವಾರುಗಳ ಮಾಲಕರು ಪಾವತಿಸಬೇಕು.

Advertisement

“ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ- 2021ರ ನಿಯಮ 3ಕ್ಕೆ ತಿದ್ದುಪಡಿ ತರಲಾಗಿದ್ದು, ಅದರ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.

ನಿಯಮ 3ರ ತಿದ್ದುಪಡಿಯಂತೆ ಯಾವುದೇ ವ್ಯಕ್ತಿಯು ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಗಳಿಗೆ ಜಾನುವಾರನ್ನು ಯಾವುದೇ ಬಗೆ ಅಥವಾ ವಿಧಾನದಲ್ಲಿ ಸಾಗಿಸಲು ಬಯಸಿದರೆ ಅಂತಹ ವ್ಯಕ್ತಿ ಪಶುಸಂಗೋಪನೆ ಇಲಾಖೆಯಿಂದ ಆನ್‌ಲೈನ್‌ನಲ್ಲಿ ಜಾನುವಾರು ಸಾಗಾಣಿಕೆ ಪರವಾನಿಗೆ ಪಾಸ್‌ ಪಡೆದುಕೊಳ್ಳಬೇಕು. ಎರಡಕ್ಕಿಂತ ಕಡಿಮೆ ಜಾನುವಾರುಗಳನ್ನು ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಗಳಿಗೆ ಸ್ಥಳೀಯ 15 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದರೆ ಪಾಸ್‌ನಿಂದ ವಿನಾಯಿತಿ ಇರಲಿದೆ. ಆದರೆ. ಪಶುಸಂಗೋಪನೆ ಇಲಾಖೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.

ದರದ ಬಗ್ಗೆ ಉಲ್ಲೇಖವಿಲ್ಲ
ಕಾಯ್ದೆಯ ನಿಯಮ 3ರ ಉಪ ನಿಯಮ (1)ರ ತಿದ್ದುಪಡಿಯಂತೆ ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಗಳಿಗೆ ಜಾನುವಾರು ಸಾಗಾಣಿಕೆಗೆ ಲಘು ವಾಣಿಜ್ಯ ವಾಹನಗಳು (ಎಲ್‌ಸಿವಿ)ಗಳ ಪಾಸ್‌ಗೆ 25 ರೂ. ಶುಲ್ಕ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ. ಅದೇ ರೀತಿ ಬಾರಿ ವಾಣಿಜ್ಯ ವಾಹನಗಳಿಗೆ (ಎಚ್‌ಸಿವಿ) ಪಾಸ್‌ಗೆ 50 ರೂ. ಶುಲ್ಕ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಜಿಎಸ್‌ಟಿ ಎಷ್ಟು ಇರಲಿದೆ ಎಂಬ ಬಗ್ಗೆ ಉಲ್ಲೇಖೀಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next