Advertisement

ಜಿಎಸ್‌ಟಿ: ಮೀನುಗಾರಿಕೆಗೆ ನೇರ ಹೊಡೆತವಿಲ್ಲ

03:45 AM Jun 30, 2017 | Team Udayavani |

ಕರಾವಳಿ ಭಾಗದ ಪ್ರಮುಖ ಉದ್ಯಮ ಎಂದು ಗುರುತಿಸಲ್ಪಟ್ಟ ಮೀನುಗಾರಿಕೆಗೆ ಜಿಎಸ್‌ಟಿಯಿಂದ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿಲ್ಲ. ಇಲ್ಲಿ ಮೀನುಗಾರಿಕೆ ತೆರಿಗೆ ವಿನಾಯಿತಿಯಿಂದ ನಡೆಯುತ್ತಿರುವುದರಿಂದ ಪರಿಣಾಮ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಮೀನುಗಾರಿಕೆಗೆ ಪ್ರಮುಖವಾಗಿ ಬೇಕಿರುವ ಮಂಜುಗಡ್ಡೆಗೆ 5 ಶೇ. ಟ್ಯಾಕ್ಸ್‌ ಬೀಳುತ್ತಿರುವುದರಿಂದ ಇದು ಮೀನುಗಾರರಿಗೆ ತೊಂದರೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಅಂದರೆ ಸಾಮಾನ್ಯವಾಗಿ ಒಂದು ಬೋಟ್‌ಗೆ ಒಮ್ಮೆ ಹೋಗುವಾಗ 15 ಟನ್‌ಗಳಷ್ಟು ಮಂಜುಗಡ್ಡೆಯ ಆವಶ್ಯಕತೆ ಇರುತ್ತದೆ. ಇದು ಮೀನುಗಾರರಿಗೆ ಪರಿಣಾಮ ಬೀರಲಿದೆ. ಉಳಿದಂತೆ ನೆಟ್‌, ಡೀಸೆಲ್‌, ಬೋಟ್‌ ಬಿಡಿಭಾಗಗಳ ಧಾರಣೆಯಲ್ಲಿ ವ್ಯತ್ಯಾಸವಾದರೆ ಕೊಂಚ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Advertisement

ಆದರೆ ಜಿಎಸ್‌ಟಿ ಕುರಿತು ಮೀನುಗಾರರಿಗೆ ಮಾಹಿತಿ ಕೊರತೆ ಕಾಡುತ್ತಿರುವುದರಿಂದ ಸ್ಪಷ್ಟವಾಗಿ ಏನೂ ಹೇಳುತ್ತಿಲ್ಲ. ಮುಖ್ಯವಾಗಿ ಮೀನಿನ ಧಾರಣೆ ಎಂಬುದು ಪ್ರತಿದಿನ ನಿರ್ಧಾರವಾಗುವುದರಿಂದ ಜಿಎಸ್‌ಟಿಯಿಂದಾಗಿ ಧಾರಣೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಡೆದು ಅದು ಇತರ ಭಾಗಗಳಿಗೆ ಆಮದಾಗುತ್ತಿರುವುದರಿಂದ ಅಲ್ಲಿ ವ್ಯತ್ಯಾಸವಾಗಬಹುದು. ಅದು ಇಲ್ಲಿನ ಉದ್ಯಮಕ್ಕೆ ಯಾವುದೇ ಪರಿಣಾಮ ಬೀರದು. ಜತೆಗೆ ಗ್ರಾಹಕರಿಗೆ ಖರೀದಿಯ ಸಂದರ್ಭದಲ್ಲಿ ಜಿಎಸ್‌ಟಿಯಿಂದಾಗಿ ಧಾರಣೆ ಹೆಚ್ಚಳವಾಗದು. 

ಜಿಲ್ಲೆಯಲ್ಲಿ ಮಾರಾಟಗಾರರು ಮೀನುಗಾರರಿಂದ ನೇರವಾಗಿ ಖರೀದಿಸಿ ಮೀನು ಮಾರಾಟ ಮಾಡುವುದರಿಂದ ಅಲ್ಲಿ ಯಾವುದೇ ರೀತಿಯ ತೆರಿಗೆ ವ್ಯವಹಾರಗಳು ನಡೆಯದೇ ಇರುವುದರಿಂದ ಧಾರಣೆ ವ್ಯತ್ಯಾಸ ಕಡಿಮೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ. ಇದರ ಉದ್ಯಮ ಕ್ಷೇತ್ರದ ತೆರಿಗೆ ಬದಲಾವಣೆಯಿಂದ ಧಾರಣೆ ವ್ಯತ್ಯಾಸವಾದರೆ ಅದು ಮೀನುಗಾರಿಕೆಗೆ ಪರಿಣಾಮ ಬೀರಲಿದೆಯೇ ಹೊರತು ಜಿಎಸ್‌ಟಿಯಿಂದ ಉದ್ಯಮಕ್ಕೆ ನೇರವಾದ ಹೊಡೆತ ಬೀಳುವುದಿಲ್ಲ. 

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next