Advertisement

GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?

11:35 PM Dec 18, 2024 | Team Udayavani |

ಹೊಸದಿಲ್ಲಿ: ಆನ್‌ಲೈನ್‌ ಆಹಾರ ವಿತರಣೆ ತಾಣಗಳಾದ ಜೊಮ್ಯಾಟೊ, ಸ್ವಿಗ್ಗಿಗಳಿಗೆ ಸಂಭ್ರಮದ ಸುದ್ದಿ ಸಿಕ್ಕಿದೆ. ಮೂಲಗಳ ಪ್ರಕಾರ ಈ ತಾಣಗಳ ಆಹಾರ ವಿತರಣೆ ಮೇಲಿನ ಜಿಎಸ್‌ಟಿಯನ್ನು ಶೇ.5 ಇಳಿಸಲಾಗುತ್ತದೆ. ಪ್ರಸ್ತುತ ಶೇ.18 ಜಿಎಸ್‌ಟಿಯನ್ನು ಜೊಮ್ಯಾಟೊ, ಸ್ವಿಗ್ಗಿ ಪಾವತಿಸುತ್ತವೆ. ಡಿ.21ರಂದು ರಾಜ ಸ್ಥಾನದ ಜೈಸಲ್ಮೇರ್‌ನಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಈ ನೀತಿ 2022ರ ಜ.1ರಿಂದಲೇ ಪೂರ್ವಾನ್ವಯ ವಾಗುತ್ತದೆ.

Advertisement

ಕೇಂದ್ರ ಸರಕಾರ ತೆರಿಗೆ ಕಡಿತ ಮಾಡಬೇಕೆಂದು ಆನ್‌­ಲೈನ್‌ ತಾಣಗಳು ಬಹಳ ಸಮಯ­ದಿಂದ ಆಗ್ರಹಿಸುತ್ತಿದ್ದವು. ಅದಕ್ಕೆ ಷರ­ತ್ತುಬದ್ಧ ಅನುಮೋದನೆ ಸಿಗುವ ಸಾಧ್ಯ­ತೆಯಿದೆ. ಅರ್ಥಾತ್‌ ಈ ತಾಣಗಳಿನ್ನು ಸರಕಾರಕ್ಕೆ ತೆರಿಗೆ ಪಾವತಿಸುವಾಗ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ವಿನಾಯಿತಿಯನ್ನು ಕೇಳುವಂತಿಲ್ಲ. ಅಂದರೆ ತಾವು ಖರೀದಿ ಮಾಡಿದ ಆಹಾರ ಪದಾರ್ಥಗಳಿಗೆ ತಾವು ಪಾವತಿಸಿದ ಜಿಎಸ್‌ಟಿ ಮೇಲೆ ವಿನಾಯಿತಿ ಪಡೆಯು­ತ್ತಿದ್ದವು. ಇನ್ನು ಜಿಎಸ್‌ಟಿ ತೆರಿಗೆಗೆ ಅರ್ಜಿ ಸಲ್ಲಿಸುವಾಗ ಈ ವಿನಾಯ್ತಿ ಕೇಳುವಂತಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next