Advertisement

GST; 1.68 ಲಕ್ಷ ಕೋಟಿ ರೂ. ಸಂಗ್ರಹ : ಶೇ.12.5 ಬೆಳವಣಿಗೆ

11:34 PM Mar 01, 2024 | Team Udayavani |

ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಶೇ.12.5 ಬೆಳವಣಿಗೆ ಕಂಡಿದ್ದು, 1.68 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ 18.40 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11.7ರಷ್ಟು ಹೆಚ್ಚಾಗಿದೆ. ತಿಂಗಳ ಸರಾಸರಿ ಸಂಗ್ರಹವು 1.67 ಲಕ್ಷ ಕೋಟಿ ರೂ. ಇದ್ದರೆ, ಕಳೆದ ವರ್ಷದಲ್ಲಿ ಈ ಪ್ರಮಾಣವು 1.5 ಲಕ್ಷ ಕೋಟಿ ರೂ. ಇತ್ತು. ಜಿಎಸ್‌ಟಿ ಸಂಗ್ರಹಕ್ಕೆ ದೇಶಿ ವ್ಯವಹಾರಗಳ ಕಾಣಿಕೆಯು ಶೇ.13.9ರಷ್ಟಿದ್ದರೆ, ಆಮದು ಜಿಎಸ್‌ಟಿ ಪ್ರಮಾಣವು ಶೇ.8.5ರಷ್ಟಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next