Advertisement

ಜಿಎಸ್‌ಬಿ ಹಿತರಕ್ಷಣಾ ವೇದಿಕೆ: ಶೈಕ್ಷಣಿಕ ಪ್ರೇರಣೆಗೆ ಕಿಕ್ಕಿರಿದ ಜನಸಂದಣಿ

10:53 PM Jun 16, 2019 | sudhir |

ಉಡುಪಿ: ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಸಮರ್ಪಣಾ ಚಾರಿಟೆಬಲ್‌ ಟ್ರಸ್ಟ್‌ ಮುದರಂಗಡಿ ಸಹಭಾಗಿತ್ವದಲ್ಲಿ ಅಜ್ಜರಕಾಡು ಪುರಭವನದಲ್ಲಿ ರವಿವಾರ ನಡೆದ ವಿದ್ಯಾಪೋಷಕ್‌ ವಿದ್ಯಾರ್ಥಿ ವೇತನ ವಿತರಣೆ, ಸಂಸ್ಕೃತ ಕಲಿತ ವಿದ್ಯಾರ್ಥಿಗಳಿಗೆ ದಿ| ಪಡುಬಿದ್ರಿ ದೇವದಾಸ ಶರ್ಮ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ ಮತ್ತು ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರಕ್ಕೆ ನಾಡಿನ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.

Advertisement

ಒಎನ್‌ಜಿಸಿ ನಿವೃತ್ತ ಡಿಜಿಎಂ ಕೃಷ್ಣ ಮೂರ್ತಿ ಭಟ್‌, ಸುಪ್ರೀಂ ಕೋರ್ಟ್‌ನ ನ್ಯಾಯವಾದಿ ಮುಂಬಯಿಯ ಎಂ.ವಿ. ಕಿಣಿ, ಮಣಿಪಾಲ ಮಧುವನ ಪ್ರಸಾದ್‌ ಇನ್‌ಫ್ರಾ ಪ್ರೈ.ಲಿ. ಎಂಡಿ ಎಚ್‌. ದಾಮೋದರ ನಾಯಕ್‌, ಕುಂದಾಪುರದ ನ್ಯಾಯವಾದಿ ಮುರುಡೇಶ್ವರ ರವಿಕಿರಣ್‌ ಶ್ಯಾನುಭೋಗ್‌, ಸಮರ್ಪಣಾ ಚಾರಿಟೆಬಲ್‌ ಟ್ರಸ್ಟ್‌ ಮುದರಂಗಡಿಯ ರತ್ನಾಕರ ಕಾಮತ್‌, ಡಾ| ಕೆ. ಸುರೇಶ್‌ ಶೆಣೈ, ವಿದ್ಯಾಪೋಷಕ್‌ ನಿಧಿ ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕ ವಿಜಯ ಕುಮಾರ್‌ ಶೆಣೈ, ನಿವೃತ್ತ ಯೋಧರಾದ ಹಿಂಬಾಳೆ ಭಾಸ್ಕರ ಕಿಣಿ, ಗೋಪಾಲಕೃಷ್ಣ ಪ್ರಭು, ಭಾಗೀರಥಿ ಕಿಣಿ, ನಾರಾಯಣಿ ದೇವದಾಸ ಶರ್ಮ, ಕುಂಬ್ಳೆ ಶ್ರೀಮತಿ ನಾಯಕ್‌, ರಾಧಿಕಾ ಭಟ್‌, ಲಕ್ಷ್ಮೀ ಆರ್‌. ಕಾಮತ್‌, ವೇದಿಕೆಯ ಸಂಚಾಲಕ ಆರ್‌. ವಿವೇಕಾನಂದ ಶೆಣೈ, ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ ಕೋಟ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌, ಪ್ರಕಾಶ್‌ ಶೆಣೈ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಜಿಎಸ್‌ಬಿ ಸಂಸ್ಕೃತಿಯಂತೆ ಮಹಿಳಾ ಅತಿಥಿಗಳಿಗೆ ಅರಿಶಿನ ಕುಂಕುಮ ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮ ಆರಂಭದ ಮುನ್ನ ಉಡುಪಿ ಅನಂತ ವೈದಿಕ ಕೇಂದ್ರದ ವೇ|ಮೂ| ಚೇಂಪಿ ರಾಮಚಂದ್ರ ಭಟ್‌ರಿಂದ ವೇದಘೋಷ ನಡೆಯಿತು. ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು 1 ಸಾವಿರಕ್ಕೂ ಮಿಕ್ಕಿ ಜಿಎಸ್‌ಬಿ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಸಮಾರಂಭದಲ್ಲಿ ಬೆಳಗ್ಗಿನ ಉಪಾಹಾರ, ಲಘು ಪಾನೀಯ, ಮಧ್ಯಾಹ್ನ ಭೋಜನದ ವ್ಯವಸ್ಥೆ, ಸಂಜೆ ಲಘು ಉಪಾಹಾರ ಅಚ್ಚುಕಟ್ಟಾಗಿತ್ತು.

ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಸಭಾ ವೇದಿಕೆಯ ಹಿಂಭಾಗ ಮತ್ತು ಉಪಾಹಾರ ಕೊಠಡಿಯಲ್ಲಿ ಬೃಹತ್‌ ಗಾತ್ರದ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next