Advertisement

ಜಿಎಸ್‌ಬಿ ಸಮಾಜ: “ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ’ವಿತರಣೆ

11:28 PM Oct 18, 2021 | Team Udayavani |

ಮಂಗಳೂರು: ವಿದ್ಯಾರ್ಥಿಗಳು ಮಾಹಿತಿಗಾಗಿ ಪ್ರಶ್ನಿಸಲು ಹಿಂಜ ರಿಯಬಾರದು. ನಾವು ಏನು ಮಾಡುತ್ತಿದ್ದೇವೆ ಎಂಬುದರ ಅರಿವು ಅವರಲ್ಲಿರಬೇಕು. ತಾರ್ಕಿಕವಾಗಿ ಆಲೋ ಚಿಸುವುದನ್ನು ಕಲಿಯಬೇಕು ಎಂದು ಇನ್ಫೋಸಿಸ್‌ನ ನಿವೃತ್ತ ಹಿರಿಯ ಉಪಾಧ್ಯಕ್ಷ ಯು. ರಾಮದಾಸ ಕಾಮತ್‌ ಹೇಳಿದರು.

Advertisement

ಉಡುಪಿ ಜಿಲ್ಲೆಯ ಸೋಮೇಶ್ವರದ ಶ್ರೀ ವೆಂಕಟರಮಣ ಸ್ವಾಮಿ ದೇವ ಸ್ಥಾನದ ಸಭಾಂಗಣದಲ್ಲಿ ಜರಗಿದ ಜಿಎಸ್‌ಬಿ ಸಮಾಜದ “ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ’ ಕಾರ್ಯಕ್ರಮದ ಐದನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಕಲ್ಪಕ ಯೋಜನೆಯ ಸ್ಥಾಪಕ ಹಾಗೂ ರೂವಾರಿ ಲೆಕ್ಕ ಪರಿ ಶೋಧಕ ನಂದಗೋಪಾಲ ಶೆಣೈ ಪ್ರಸ್ತಾವನೆ ಗೈದು, ವಿದ್ಯಾಕಲ್ಪಕ ವಿದ್ಯಾರ್ಥಿವೇತನ ನಿಧಿ ಒಂದು ಸಂಸ್ಥೆಯಲ್ಲ, ಅದು ಒಂದು ಕಲ್ಪನೆ. ಇಲ್ಲಿ ದಾನಿ ಹಾಗೂ ವಿದ್ಯಾರ್ಥಿಯ ನಡುವೆ ನೇರ ಸಂಪರ್ಕ ಇರುತ್ತದೆ. ದಾನಿಗಳು ವಿದ್ಯಾರ್ಥಿಯ ಖಾತೆಗೆ ಹಣ ವರ್ಗಾಯಿಸುತ್ತಾರೆ. ಈ 5 ವರ್ಷ ಗಳಲ್ಲಿ 194 ವಿದ್ಯಾರ್ಥಿಗಳು ಈ ಸೌಲ ಭ್ಯಕ್ಕೆ ಅರ್ಹರಾಗಿದ್ದು 1 ಕೋಟಿ 63 ಲಕ್ಷ ರೂ. ನೀಡಲಾಗಿದೆ ಎಂದರು.

ಸಮ್ಮಾನ
ಸೋಮೇಶ್ವರದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮೊಕ್ತೇಸರರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ ದಾನಿ ಹಾಗೂ ಸಮಾಜಸೇವಕ ಕೆ. ಮಂಜುನಾಥ ಕಾಮತ ಮುದ್ರಾಡಿ ಆವರನ್ನು ಸಮ್ಮಾನಿಸಲಾ ಯಿತು. ಕೊಂಕಣಿ ಕವಿತಾ ರಚನೆ ಸ್ಪರ್ಧೆಯ ವಿಜೇತರಿಗೆ ಸೋಮೇಶ್ವರದ ಶ್ರೀ ವೆಂಕಟರಮಣ ಸ್ವಾಮಿ ದೇವ ಸ್ಥಾನದ ಮೊಕ್ತೇಸರ ಕಾರ್ಯದರ್ಶಿ ಎಸ್‌. ರಾಘವೇಂದ್ರ ಭಕ್ತ ಅವರು ಬಹುಮಾನ ನೀಡಿ ಶುಭ ಕೋರಿದರು.

ಕಳೆದ ಬಾರಿಯ ಕೊಂಕಣಿ ಎಂಎ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ ಮಂಗಳೂರಿನ ಅನಿತಾ ಶೆಣೈ ಅವರನ್ನು ಉಷಾ ನಂದಗೋಪಾಲ ಶೆಣೈ ಸಮ್ಮಾನಿಸಿದರು. ಭಾಷಣಗಾರ ರಾಜೇಂದ್ರ ಭಟ್‌ ಕೆ. ಅವರನ್ನು ಕೇಶವೇಂದ್ರ ಚಾರಿಟೆಬಲ್‌ ಟ್ರಸ್ಟನ ಕಾರ್ಯದರ್ಶಿ ಕುಲ್ಯಾಡಿ ಗಿರೀಶ ಪೈ ಸಮ್ಮಾನಿಸಿದರು.

Advertisement

ಇದನ್ನೂ ಓದಿ:ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ವಿದ್ಯಾರ್ಥಿವೇತನ ಪಡೆದವರನ್ನು ಗೌರವಿಸಲಾಯಿತು. ಕುಂದಾಪುರದ ಕಾರ್ತಿಕ ಭಟ್‌ (ಕುಸ್ತಿ), ಪಾಣೆ ಮಂಗಳೂ ರಿನ ಆರಾಧನಾ ಶೆಣೈ (ಶೈಕ್ಷಣಿಕ ಸಾಧನೆ), ಬಂಟವಾಳದ ಧನ್ಯಶ್ರೀ ಬಾಳಿಗಾ (ಶೈಕ್ಷಣಿಕ ಸಾಧನೆ), ಕಾರ್ಕಳದ ರಚನಾ ಡಿ. ಭಟ್‌ (ಸಿ.ಎ. ಐಪಿಸಿಸಿ), ಕಾರ್ಕಳ ಮಾಳದ ನಿತಿನ್‌ ಶೆಣೈ (ಸಿಎ ಐಪಿಸಿಸಿ), ಕಾರ್ಕಳದ ಸಂಗೀತಾ ಕಾಮತ್‌ (ಹಳೆ ವಿದ್ಯಾರ್ಥಿ) ಅವರನ್ನು “ಕ್ಷಮತಾ’ ಕಾರ್ಯಕ್ರಮದ ಸಂಚಾಲಕ ಸಿಎ ಗಿರಿಧರ ಕಾಮತ್‌ ಮತ್ತು ವಿಶ್ವ ಕೊಂಕಣಿ ಭಾಶಾ ಸಂಸ್ಥಾನದ ನಿರ್ದೇಶಕ ಗುರುದತ್ತ ಬಂಟ್ವಾಳಕರ್‌ ಸಮ್ಮಾನಿಸಿದರು. ವಿದ್ಯಾರ್ಥಿ ವೇತನ ನಿಧಿಯ ಕಾರ್ಯಗಳಲ್ಲಿ ಸಹಕರಿಸಿದ ಜಗದೀಶ ಹೆಗ್ಡೆ ಹಾಗೂ ಪವನ ಭಟ್‌ ಅವರನ್ನು ಸಮ್ಮಾನಿಸಲಾಯಿತು.

ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್‌ ಕೆ. ಪ್ರಧಾನ ಭಾಷಣ ಮಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್‌. ಯೋಗೀಶ ಭಟ್‌ ಸ್ವಾಗತಿಸಿದರು. ಜಗದೀಶ ಹೆಗ್ಡೆ ವಂದಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕವಿತೆ ಸ್ಪರ್ಧೆ ವಿಜೇತರು

ಪ್ರಥಮ (25,000 ರೂ.): ಅಂಕಿತಾ ಶೆಣೈ ಪೆರ್ಮುದೆ, ಗೋಪಾಲಕೃಷ್ಣ ಭಟ್‌ ಕಣ್ಣೂರು, ಅನುಷಾ ವಿ. ಶೆಣೈ ಕಾಪು.ದ್ವಿತೀಯ (15,000 ರೂ.): ಸತ್ಯದೇವ ನಾಯಕ್‌ ಬಿದ್ಕಲ್‌ ಕಟ್ಟೆ, ದೀಕ್ಷಾ ವಿ. ಕಿಣಿ, ಮಂಗಳೂರು, ಸಂಜನಾ ಭಟ್‌ ಬೆಳ್ತಂಗಡಿ, ಸಾಯೀಶ್‌ ವಿ. ಕಿಣಿ ಮಂಗಳೂರು.
ತೃತೀಯ (10,000 ರೂ.): ವಂದನಾ ಪ್ರಭು ಮುಂಡ್ಕೂರು, ತಾರಾ ಆರ್‌, ಕಿರಿಮಂಜೇಶ್ವರ, ರಮ್ಯಾ ಬೆಳ್ಮಣ್‌.

Advertisement

Udayavani is now on Telegram. Click here to join our channel and stay updated with the latest news.

Next