Advertisement

ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ: ವಿದ್ಯಾಪೋಷಕ ನಿಧಿಯ ವಿದ್ಯಾರ್ಥಿವೇತನ ವಿತರಣೆ

11:07 PM Aug 06, 2023 | Team Udayavani |

ಉಡುಪಿ: ಸಂಘಟನಾತ್ಮಕ ವಾಗಿ ಸಮಾಜದ ಸವಲತ್ತು ವಂಚಿತ ರಿಗೆ ಸವಲತ್ತು ಒದಗಿಸುವ ಕೆಲಸವನ್ನು ವೇದಿಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ವೇದಿಕೆಯಿಂದ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ವಿದ್ಯಾವಂತ ರಾಗಿ ಸಮಾಜಕ್ಕೆ ಪೂರಕವಾದ ಕೆಲಸ ಮಾಡಬೇಕು ಎಂದು ಮಣಿಪಾಲ ಹೌಸಿಂಗ್‌ ಫೈನಾನ್ಸ್‌ ಮತ್ತು ಸಿಂಡಿಕೇಟ್‌ ಲಿ. ಸಂಸ್ಥಾಪಕ ತೋನ್ಸೆ ನಾರಾಯಣ ಪೈ ತಿಳಿಸಿದರು.

Advertisement

ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ, ಮುದರಂಗಡಿ ಸಮರ್ಪಣ ಚಾರಿಟೆಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಅಂಬಾಗಿಲು ಅಮೃತ್‌ ಗಾರ್ಡನ್‌ ಸಭಾಂಗಣದಲ್ಲಿ ರವಿವಾರ ನಡೆದ ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿ ಸಿದ ಅವರು ಮಾತನಾಡಿ, ನಾವು ಮೇಲೇರಲು ನೆರವಾದ ಏಣಿಯನ್ನು ಮರೆಯದೆ ವೇದಿಕೆಯೊಂದಿಗೆ ಕೈಜೋಡಿಸಿ ಮುಂದಿನ ವಿದ್ಯಾರ್ಥಿ ಗಳಿಗೆ ನೆರವಾಗಬೇಕು ಎಂದರು.

ಕರ್ಣಾಟಕ ಬ್ಯಾಂಕ್‌ ಮಂಗಳೂರು ಪ್ರಧಾನ ಕಚೇರಿಯ ಚೀಫ್ ಬ್ಯುಸಿನೆಸ್‌ ಆಫೀಸರ್‌ ಗೋಕುಲದಾಸ ಪೈ ಮಾತ
ನಾಡಿ, ಪ್ರತಿಯೊಬ್ಬರೂ ಆರ್ಥಿಕ ಸ್ವಾತಂತ್ರ್ಯ ಹೊಂದಲು ಸಾಧಿಸುವ ಗುಣ ಮೈಗೂಡಿ ಕೊಳ್ಳಬೇಕು ಎಂದರು.

ನ್ಯಾಚುರಲ್‌ ಐಸ್‌ಕ್ರೀಮ್‌ನ ರಘುನಂದನ ಎಸ್‌. ಕಾಮತ್‌ ಅವರು, ದಿ| ಎಂ.ವಿ. ಕಿಣಿಯವರ ಸ್ಮರಣೆ ಮಾಡಿದರು. ಬೆಂಗಳೂರು ವಿಪ್ರೋ ಲಿ.ನ ಎಚ್‌ಆರ್‌ ವಿಭಾಗದ ಜಿಎಂ ಪ್ರವೀಣ ಕಾಮತ್‌ ಕುಂಬ್ಳೆ ದಿಕ್ಸೂಚಿ ಭಾಷಣಗೈದರು. ಕಲ್ಯಾಣಪುರ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತಪದ್ಮನಾಭ ಕಿಣಿ ಅಧ್ಯಕ್ಷತೆ ವಹಿಸಿದ್ದರು.

ಮೈಸೂರು ಪೈ ಗ್ರೂಪ್‌ ಆಫ್ ಹೊಟೇಲ್ಸ್‌ನ ಜಿಎಂ ಕೆ. ಮಹೇಶ ಕಾಮತ್‌, ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್‌, ಉದ್ಯಮಿ ಗಳಾದ ಪ್ರಕಾಶ ಪ್ರಭು, ರೀತಾ ಪ್ರಕಾಶ ಪ್ರಭು, ಪುಷ್ಪಲತಾ ರಘುನಂದನ ಕಾಮತ್‌, ವೇದಿಕೆ ಸಂಚಾಲಕ ಆರ್‌. ವಿವೇಕಾನಂದ ಶೆಣೈ, ವಿದ್ಯಾಪೋಷಕ ನಿಧಿ ಸಂಚಾಲಕ ವಿಜಯ ಕುಮಾರ್‌ ಶೆಣೈ ಉಪಸ್ಥಿತರಿದ್ದರು. ವಿದ್ಯಾರ್ಥಿ ಪೋಷಕ ನಿಧಿ ಅಧ್ಯಕ್ಷ ಲೆಕ್ಕಪರಿಶೋಧಕ ಎಸ್‌.ಎಸ್‌. ನಾಯಕ್‌ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌ ನಿರೂಪಿಸಿ, ಅಧ್ಯಕ್ಷ ಜಿ. ಸತೀಶ ಹೆಗಡೆ ವಂದಿಸಿದರು.

Advertisement

ಜಿಎಸ್‌ಬಿ ಸಮಾಜದ ಕೊಡುಗೆ
ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ತೋನ್ಸೆ ಪೈ ಕುಟುಂಬದ ಟಿಎಂಎ ಪೈಯವರು ಬಡತನ ನಿರ್ಮೂಲನೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ಕೊಟ್ಟಿದ್ದರು. ಬಡತನ ನಿರ್ಮೂಲನೆಗಾಗಿ ಬ್ಯಾಂಕ್‌ ತೆರೆದು ಆರ್ಥಿಕ ಸ್ವಾವಲಂಬನೆಗಾಗಿ ಆರಂಭದಲ್ಲಿ ಪಿಗ್ಮಿ ಆರಂಭಿಸಿದರು. ಸರ್ವರಿಗೂ ಶಿಕ್ಷಣ ದೊರಕಬೇಕೆನ್ನುವ ನೆಲೆಯಲ್ಲಿ ಕಿಂಡರ್‌ ಗಾರ್ಟನ್‌ನಿಂದ ಹಿಡಿದು ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜಯಗಳನ್ನು ಪ್ರಾರಂಭಿಸಿದರು. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ಸುಧಾರಣೆಯಾಗ ಬೇಕೆಂದು ಮನಗಂಡು ಕಸ್ತೂರ್ಬಾ ಆಸ್ಪತ್ರೆ ತೆರೆದಿದ್ದಾರೆ. ಹೀಗೆ ಜಿಎಸ್‌ಬಿ ಸಮುದಾಯವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದು ತೋನ್ಸೆ ನಾರಾಯಣ ಪೈ ತಿಳಿಸಿದರು.

75 ಲ.ರೂ. ವಿತರಣೆ
ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಪೋಷಕರನ್ನು ಕಳೆದುಕೊಂಡಿರುವ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತು ಯೋಜನೆಯ ಮೂಲಕ 75 ಲಕ್ಷ ರೂ. ವಿತರಿಸಲಾಯಿತು. ದಿ| ಎಂ.ವಿ. ಕಿಣಿಯವರ ಸಂಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next