Advertisement

ಸಯಾನ್‌ ಜಿಎಸ್‌ಬಿ ಮೆಡಿಕಲ್‌ ಟ್ರಸ್ಟ್‌: ಹೆಲ್ತ್‌ ರಕ್ಷಕ್‌ಗೆ ಚಾಲನೆ

05:08 PM Mar 30, 2017 | |

ಮುಂಬಯಿ: ಸಯಾನ್‌ ಪೂರ್ವದ ಶಿಲ್ಪಾ ಅಪಾರ್ಟ್‌ಮೆಂಟ್‌ನಲ್ಲಿರುವ  ಜಿಎಸ್‌ಬಿ ಮೆಡಿಕಲ್‌ ಟ್ರಸ್ಟ್‌ ವತಿಯಿಂದ ಹೆಲ್ತ್‌ ರಕ್ಷಕ್‌ ವಿಶೇಷ ಕೊಡುಗೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.

Advertisement

ಸಂಸ್ಥೆಯ ಈ ನೂತನ ಯೋಜನೆಯಿಂದ ಗ್ಯಾಸ್ಟೊÅà ಸ್ಕೋಪ್‌, ಕೊಲೊನೋ ಸ್ಕೋಪ್‌ ಇತ್ಯಾದಿಗಳನ್ನು ಹೆಲ್ತ್‌ ರಕ್ಷಕ್‌ ಯಂತ್ರದಿಂದ ಮಾಡಬಹುದು. ಡಾ| ಮುಕುಂದ್‌ ಮೆಹ್ತಾ ಅವರು ತಮ್ಮ ಮಾತಾಪಿತರಾದ ಶ್ರೀದೇವಿ ಮಹಾಲೆ ಮತ್ತು ಬಾಬುರಾವ್‌ ಮಹಾಲೆ ಅವರ ಸಂಸ್ಮರಣಾರ್ಥ ಈ ವಿನೂತನ, ಅತ್ಯಾಧುನಿಕ ವೈಜ್ಞಾನಿಕ ಯಂತ್ರವನ್ನು ಸಂಸ್ಥೆಗೆ ಪ್ರದಾನಿಸಿದರು. ಜಿಎಸ್‌ಬಿ ಮೆಡಿಕಲ್‌ ಟ್ರಸ್ಟ್‌ನ ಈ ಅತ್ಯಾಧುನಿಕ ಯಂತ್ರವನ್ನು ಹೊಂದಿರುವುದರಿಂದ ಸಮಾಜ ಬಾಂಧವರಿಗೆ ಬಹಳಷ್ಟು ಅನುಕೂಲವಾದಂತಾಗಿದೆ.

ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ| ಸುಹಾಸ್‌ ಪ್ರಭು ಅವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಡಾ| ಕುಮುದಾ ಮೆಹ¤ ಮತ್ತು ಡಾ| ಪ್ರವೀಣ್‌ ಮೆಹ¤ ಅವರು ನೂತನ ಯಂತ್ರಕ್ಕೆ ಚಾಲನೆ ನೀಡಿ, ಭವಿಷ್ಯದಲ್ಲಿ ಸಮಾಜ ಬಾಂಧವರಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದು ನುಡಿದು ಶುಭ ಹಾರೈಸಿದರು.

ಮಹಾಲೆ ಕುಟುಂಬದ ಹಿರಿಯ ಸದಸ್ಯ ಡಾ| ವಿ. ವಿ. ಪ್ರಭು ಅವರು ಉಪಸ್ಥಿತರಿದ್ದು ಮಹಾಲೆ ಕುಟುಂಬಿಕರ ಸಮಾಜಪರ ಕಾರ್ಯಕ್ರಮಗಳನ್ನು ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ  ಗೀತಾ ಆರ್‌. ಪೈ  ಅವರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸಿಬಂದಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next