Advertisement
ಫೆ. 4 ರಂದು ಸಂಜೆ ಡೊಂಬಿವಲಿ ಪೂರ್ವದ ಎಸ್. ವಿ. ಜೋಶಿ ಮೈದಾನದಲ್ಲಿ ಜಿಎಸ್‌ಬಿ ಮಂಡಳ ಡೊಂಬಿವಲಿ ಇದರ ವಾರ್ಷಿಕ ಪಂಡಿತ್ ಭೀಮಸೇನ್ ಜೋಶಿ ಸಂಸ್ಮರಣ ಸಂಗೀತ ಮಹೋತ್ಸವದಲ್ಲಿ ಪಂಡಿತ್ ಭೀಮ್‌ಸೇನ್ ಜೋಶಿ ಸ್ಮೃತಿ ಪುರಸ್ಕಾರ ಸ್ವೀಕರಿಸಿದ ಮಾತನಾಡಿದ ಇವರು, ಮಹಾರಾಷ್ಟ್ರ ಸಾಂಸ್ಕೃತಿಕ ಹಾಗೂ ಕಲೆಯ ತವರು ಎಂಬ ಹೆಗ್ಗಳಿಕೆಗೆ ಪಾತ್ರವಾದ ಡೊಂಬಿವಲಿ ಕಲಾ ಪ್ರೇಮಿಗಳು ನೀಡಿದ ಈ ಪುರಸ್ಕಾರವು ನನ್ನ ಪಾಲಿಗೆ ಗುರುವಿನ ಆಶೀರ್ವಾದದ ಪ್ರತೀಕವಾಗಿದೆ. ಈ ಪುರಸ್ಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ. ಪಂಡಿತ್ ಭೀಮ್‌ಸೇನ್ ಜೋಶಿ ಅವರಂತಹ ಕಲಾವಿದ ಮತ್ತೆ ಹುಟ್ಟಿಬರುವುದು ಅಸಾಧ್ಯದ ಮಾತಾಗಿದೆ. ಸಂಗೀತ ಕ್ಷೇತ್ರದಲ್ಲಿ ಕಿರಾಣಾ, ಗ್ವಾಲಿಯರ್ ಮೊದಲಾದ ಘರಾಣಿಗಳಲ್ಲಿ ನಮ್ಮ ಪಾಲಿಗೆ ಭೀಮಸೇನ್ ಜೋಶಿ ಅವರ ಘರಾಣಿಯೇ ಶ್ರೇಷ್ಟವಾಗಿದ್ದು, ನನ್ನ ಸಾಧನೆಗೆ ನನ್ನ ತಂದೆ-ತಾಯಿಗಳ ಆಶೀರ್ವಾದ ಹಾಗೂ ಗುರು ಶ್ರೀ ಚಿದಂಬರರ ಆಶೀರ್ವಾದವೇ ಕಾರಣವಾಗಿದೆ ಎಂದರು.
Related Articles
Advertisement
ಮುಖ್ಯ ಅತಿಥಿಗಳಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕೀಯ ನಿರ್ದೇಶಕ ಕೆ. ಆರ್. ಕಾಮತ್ ಹಾಗೂ ಗೌರವ ಅತಿಥಿಗಳಾಗಿ ಹಿರಿಯ ಸಂಗೀತ ಕಲಾವಿದ ಪಂಡಿತ್ ಮಧುಕರ ಜೋಶಿ, ಮುಂಬಯಿ ಜಿಎಸ್‌ಬಿ ಸೇವಾ ಮಂಡಳದ ಗೌರವ ಕಾರ್ಯದರ್ಶಿ ರಾಮನಾಥ ಕಿಣಿ, ಮುಂಬಯಿ ಜಿಎಸ್‌ಬಿ ಟೆಂಪಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಅವಧೂತ ಧಾಬೋಳ್ಕರ್, ಬ್ಲೇಸ್ ಜಿಎಸ್‌ಬಿ ಫಾರ್ಮ್ ವ್ಯವಸ್ಥಾಪಕೀಯ ನಿರ್ದೇಶಕ ಎಸ್. ಎನ್. ಕಾಮತ್, ವೈದ್ಯ ಡಾ| ವೈ. ಎಸ್. ಆಚಾರ್ಯ, ಮನೋಹರ ಪೈ ಮೊದಲಾದರು ಉಪಸ್ಥಿತರಿದ್ದರು. ಗಣಪತಿ ಸ್ತುತಿಯೊಂದಿಗೆ, ತಾಯಿ ಶಾರದಾಂಬೆ ಹಾಗೂ ಪಂಡಿತ್ ಭೀಮ್‌ಸàನ್ ಜೋಶಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಸಂಯೋಜಕ ವಿಶ್ವನಾಥ್ ಭಟ್ ಸ್ವಾಗತಿಸಿದರು ವಂದಿಸಿದರು. ರಮೇಶ್ ಪೈ ಅವರು ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ಕಾರ್ಯಕ್ರಮ ನೀಡಿದ ರಾಜೇಶ್ ಪಡಿಯಾರ, ಕವಿತಾ ಶೆಣೈ, ಹಿಮ್ಮೇಳದಲ್ಲಿ ಸಹಕರಿಸಿದ ತಬಲ ವಾದಕರುಗಳಾದ ಪಂಡಿತ್ ಓಂಕಾರ್ ಗುಲ್ವಾಡಿ ಮತ್ತು ಶ್ರೀವತ್ಸ ಶರ್ಮಾ, ಹಾರ್ಮೋನಿಯಂ ವಾದಕ ಪ್ರಸಾದ್ ಕಾಮತ್, ಪಖ್ವಾಜ್ ವಾದಕ ಶಿವಾಜಿ ಬುಧಕರ ಮೊದಲಾದವರನ್ನು ಗೌರವಿಸಲಾಯಿತು.
ಗಾಯಕರಾದ ರಾಜೇಶ್ ಪಡಿಯಾರ್, ಕವಿತಾ ಶೆಣೈ ಅವರು ಕನ್ನಡ, ಮರಾಠಿ, ಹಿಂದಿ ಭಜನೆ ಹಾಗೂ ಅಭಂಗಗಳನ್ನು ಪ್ರಸ್ತುತಪಡಿಸಿದರು. ಪ್ರಶಸ್ತಿ ಪುರಸ್ಕೃತ ಪಂಡಿತ್ ವಿನಾಯಕ ತೋರವಿ ಅವರು ಕನ್ನಡ, ಮರಾಠಿ, ಹಿಂದಿ ಅಭಂಗಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು. ಯುವ ಪ್ರತಿಭೆಗಳಾದ ದತ್ತಾತ್ರೇಯ ವೆಲಣRರ್, ಸಿದ್ದಾರ್ಥ್ ಬೆಳಮಗಿ, ರವೀಂದ್ರ ಶೆಣೈ, ಪದ್ಮನಾಭ ಪೈ, ಸುಧೀರ್ ಅವರು ಹಿಮ್ಮೇಳದಲ್ಲಿ ಸಹಕರಿಸಿದರು.
ಸುಧೀರ್ ನಾಯಕ್, ಯು. ಪದ್ಮನಾಭ ಪೈ, ರವೀಂದ್ರ ಶೆಣೈ ಕಾರ್ಯಕ್ರಮದ ಸಹಪ್ರಾಯೋಜಕರಾಗಿ ಸಹಕರಿಸಿದರು. ಅಮೇಯ ಬಾಳ ಕಾರ್ಯಕ್ರಮ ನಿರ್ವಹಿಸಿದರು. ಸಾರಸ್ವತ್ ಬ್ಯಾಂಕ್, ಬ್ಲಿಸ್ ಜಿವಿಎಸ್ ಫಾರ್ಮ್ ಹಾಗೂ ಜಿಎಸ್‌ಪಿ ಟೆಂಪಲ್ ಟ್ರಸ್ಟ್, ಎನ್‌ಕೆಜಿಎಸ್‌ಬಿ ಬ್ಯಾಂಕ್ ಅವರು ಪ್ರಾಯೋಜಕತ್ವವನ್ನು ವಹಿಸಿದ್ದರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ:ಗುರುರಾಜ ಪೋತನೀಸ್