Advertisement
ಇದುವರೆಗೆ ಜನರಿಂದ ಜಲಮಂಡಳಿಗೆ 66.73 ಕೋಟಿ ರೂ.ಗಳ ಬಾಕಿ ಬರಬೇಕಿದೆ. ಜನರಿಂದ ಜಲಮಂಡಳಿಗೆ ಕೋಟಿ ಕೋಟಿ ಬಾಕಿ ಬರಬೇಕಿದ್ದು, ಅದರಲ್ಲಿ 2ಲಕ್ಷ ರೂ.ಗಳ ಮೇಲ್ಪಟ್ಟ ನೀರಿನ ಕರ ಬಾಕಿ ಉಳಿಸಿಕೊಂಡವರು 284, 1ರಿಂದ 2ಲಕ್ಷ ರೂ.ಗಳ ಮೇಲ್ಪಟ್ಟು ಬಾಕಿ ಉಳಿಸಿಕೊಂಡವರು 173, 50ರಿಂದ 1ಲಕ್ಷ ರೂ.ಗಳವರೆಗೆ ಬಾಕಿ ಉಳಿಸಿಕೊಂಡವರು 4409, 25ರಿಂದ50 ಸಾವಿರ ರೂ. ಗಳ ಬಾಕಿ ಉಳಿಸಿಕೊಂಡವರು 3643, 20 ರಿಂದ 25 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 1686, 15 ರಿಂದ 20 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 2123, 10 ರಿಂದ 15 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 2304, 5 ರಿಂದ 10 ಸಾವಿರ ರೂ. ಗಳ ಬಾಕಿ ಉಳಿಸಿಕೊಂಡವರು 3316, 2 ರಿಂದ 5 ಸಾವಿರ ರೂ.ಗಳ ಬಾಕಿ ಉಳಿಸಿಕೊಂಡವರು 46047, 2 ಸಾವಿರ ರೂ.ಗಳ ಮೇಲ್ಪಟ್ಟವರು 14251 ಸಂಪರ್ಕ ಪಡೆದವರು ಸುಮಾರು 66,73,10,336 ರೂ.ಗಳ ಬಾಕಿ ಜಲಮಂಡಳಿಗೆ ಸಂದಾಯವಾಗಬೇಕಿದೆ. ಅವಳಿನಗರದಲ್ಲಿ ಎಲ್ಲ 67 ವಾರ್ಡ್‌ಗಳಲ್ಲಿ 24/7 ನೀರು ಪೂರೈಸುವ ಯೋಜನೆ ಪ್ರಗತಿಯಲ್ಲಿದ್ದು, ಹಲವು ವಾರ್ಡುಗಳಲ್ಲಿ ಯೋಜನೆ ಪ್ರಾಯೋಗಿಕವಾಗಿ ಚಾಲನೆಯಲ್ಲಿದೆ. ಅವಳಿನಗರದ ವ್ಯಾಪ್ತಿಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದೇ ನಿಟ್ಟಿನಲ್ಲಿ ಜಲಮಂಡಳಿ ಕೂಡಾ ವೇಗ ಪಡೆಯಬೇಕಿತ್ತು. ಆದರೆ ಆರ್ಥಿಕ ಹೊರೆಯಿಂದ ಜಲಮಂಡಳಿ ಹಿನ್ನಡೆ ಅನುಭವಿಸುವಂತಾಗಿದೆ.
Related Articles
Advertisement
ಇನ್ನು ಅತಿ ಕಡಿಮೆ ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ವಾರ್ಡು 27-62218 ರೂ.ಗಳ ಪ್ರಥಮ, ವಾರ್ಡು 28-88226 ದ್ವಿತೀಯ ಹಾಗೂ ವಾರ್ಡು 31-1 ಲಕ್ಷ ರೂ.ಗಳ ಬಾಕಿ ಉಳಿಸಿಕೊಳ್ಳುವ ತೃತೀಯ ಸ್ಥಾನ ಪಡೆಯುತ್ತವೆ. ಹಲವಾರು ವರ್ಷಗಳಿಂದ ಜನರು ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಕೆಲ ಬಡಾವಣೆಗಳಲ್ಲಿ ನೀರಿನ ಬಿಲ್ ಬಾಕಿ ಕೇಳಲಾರದಂತಹ ಸ್ಥಿತಿ ಇದೆ. ಕೆಲ ಬಡಾವಣೆಗಳಲ್ಲಿ ಕೇವಲ ಬಿಲ್ ನೀಡುವುದು, ಬಿಟ್ಟರೆ ನೋಟಿಸ್ ನೀಡುವುದು ಮಾತ್ರ ಮಾಡಬಹುದು. ಅದನ್ನು ಬಿಟ್ಟರೆ ಮತ್ತೇನೂ ಮಾಡುವಂತಿಲ್ಲ. ಅಂತಹ ಸ್ಥಿತಿ ನಗರದ ಕೆಲ ಬಡಾವಣೆಗಳಲ್ಲಿದೆ. ಕೆಲ ಬಡಾವಣೆಗಳಲ್ಲಿ ಮನೆ ಬಿಟ್ಟು ಹೋಗಿರುವುದು,
ಜಲಮಂಡಳಿಯೊಂದಿಗೆ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ ಬಿಲ್ ಬಾಕಿ ಉಳಿದುಕೊಂಡಿವೆ. ಒಟ್ಟಿನಲ್ಲಿ ಹಲವಾರು ಕಾರಣಗಳಿಂದ ಜಲಮಂಡಳಿಗೆ ಮಾತ್ರ ಕೋಟ್ಯಂತರ ರೂ.ಗಳ ಬಾಕಿ ಶುಲ್ಕ ಪಾವತಿಯಾಗಬೇಕಿದೆ.
ಬಸವರಾಜ ಹೂಗಾರ