Advertisement

ಗಿಡಮರ ಬೆಳೆಸಿ, ಪರಿಸರ ಉಳಿವಿಗೆ ಶ್ರಮಿಸಿ: ಶ್ರೀಧರ್‌

03:45 AM Jul 07, 2017 | Team Udayavani |

ಜಪ್ಪಿನಮೊಗರು: ಪ್ರಸ್ತುತ ನಮ್ಮ ಪರಿಸರವು ಬಹಳ ಮಾಲಿನ್ಯದಿಂದ ಕೂಡಿದ್ದು, ಪರಿಸರವನ್ನು ರಕ್ಷಿಸಲು ಪಣ ತೊಡಬೇಕಾಗಿದೆ. ಪರಿಸರ ಉಳಿಸಿ ಗಿಡಗಳನ್ನು ಬೆಳೆಸಿ ನೀರನ್ನು ಸಂರಕ್ಷಿಸುವುದು ನಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಮನೆಯವರು ಇಂತಹ ವನಮಹೋತ್ಸವದಲ್ಲಿ ಭಾಗವಹಿಸಿ ಸಸಿಗಳನ್ನು ಪಡೆದು ಬೆಳೆಸಿ ಪರಿಸರ ಉಳಿ ಸಲು ತಮ್ಮ ಕೊಡುಗೆ ನೀಡಬೇಕು ಎಂದು ಜಿಲ್ಲಾ ಅರಣ್ಯಾಧಿಕಾರಿ ಶ್ರೀಧರ್‌ ಹೇಳಿದರು.

Advertisement

ಅವರು ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ಗುರು ಮಂದಿರದಲ್ಲಿ ಜರಗಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪರಿಸರದ ಅಮೂಲ್ಯ ಸಂಪತ್ತು ಗಳಲ್ಲಿ ಮರಗಿಡಗಳಿಗೆ ಬಹಳ ಪ್ರಾಮುಖ್ಯ ವಿದೆ. ಹೆಚ್ಚಿನ ಮರಗಳು ಹಾಗೂ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳನ್ನು ಬೆಳೆಸಿದಾಗ ಮಾತ್ರ ಅವುಗಳ ಪ್ರಾಮುಖ್ಯವನ್ನು ತಿಳಿಯಬಹುದು. ಇಂದಿನ ಪೀಳಿಗೆಗೆ ಇದನ್ನು ತಿಳಿಯಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಗುರು ಮಂದಿರದ ಆವರಣ ಮತ್ತು ಜಪ್ಪಿನಮೊಗರು  ಕಂರ್ಭಿಸ್ಥಾನದ ಕಂರ್ಭಿ ಕೆರೆಯ ಪರಿಸರದಲ್ಲಿ ಸಸಿಗಳನ್ನು ನೆಡಲಾಯಿತು ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು. 

ಬ್ರಹ್ಮಶೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಜೆ. ದಿನೇಶ್‌ ಅಂಚನ್‌ ಅಧ್ಯಕ್ಷತೆ ವಹಿಸಿದ್ದರು.
ಮಹಾನಗರಪಾಲಿಕೆಯ ಸ್ಥಳೀಯ ಸದಸ್ಯರಾದ ಜೆ. ಸುರೇಂದ್ರ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಪ್ರಮುಖರಾದ  ಚೆನ್ನಯ ಸ್ವಾಮಿ, ನಾರಾಯಣಗುರು ಸೇವಾ ಸಂಘದ ಉಪಾಧ್ಯಕ್ಷ ಚಿತ್ತರಂಜನ್‌ ಬೋಳಾರ್‌, ಮಹಿಳಾ ಸಮಿತಿಯ ಅಧ್ಯಕ್ಷೆ ಉಷಾ ಸಿ. ಬೋಳಾರ್‌, ರಮಣಿ ಗಣೇಶ್‌ ಸಾಲ್ಯಾನ್‌, ಖಜಾಂಚಿ ಚಂದ್ರಹಾಸ್‌ ಕಟ್ಟೆಪುಣಿ, ಜತೆ ಕಾರ್ಯದರ್ಶಿ ಚಿತ್ರಾಕ್ಷ ಪೂಜಾರಿ, ಮಹಿಳಾ ಸಮಿತಿಯ ಉಪಾಧ್ಯಕ್ಷೆ ಉಷಾ ಕೆ., ಕಾರ್ಯದರ್ಶಿ ಜಯಲಕ್ಷಿ$¾, ಖಜಾಂಚಿ ಮೋಹಿನಿ ಸುವರ್ಣ, ಜತೆ ಕಾರ್ಯದರ್ಶಿ ಶಕುಂತಳಾ, ಆರೋಗ್ಯ ಸಮಿತಿ ಸಂಚಾಲಕ ರಂಜನ್‌ ಕೂದೂರ್‌, ಭಜನ ಸಮಿತಿಯ ಸಂಚಾಲಕ ಗಂಗಾಧರ ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement

ಸಂಘದ ಕಾರ್ಯದರ್ಶಿ ಮನೋಜ್‌ ಪೂಜಾರಿ ಸ್ವಾಗತಿಸಿದರು. ಚೇತನ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next