Advertisement

ಧನಾತ್ಮಕ ಚಿಂತನೆಯಿಂದ ಆತ್ಮವಿಶ್ವಾಸ ವೃದ್ಧಿ: ಬಾಲಕೃಷ್ಣ 

03:45 AM Jul 02, 2017 | Team Udayavani |

ನೆಹರೂನಗರ : ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಅವಕಾಶಗಳು ಬಹಳ ಸಿಗುತ್ತವೆ. ಅವುಗಳನ್ನು ಸದು ಪಯೋಗಪಡಿಸಿಕೊಳ್ಳಬೇಕು. ಮೊದಲು ಆತ್ಮಗೌರವವನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆಗಳು ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ. ಕ್ರಿಯಾತ್ಮಕ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ನಮ್ಮ ಕೌಶಲವನ್ನು ಉತ್ಕೃಷ್ಟ ಗೊಳಿಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಎಚ್‌. ಹೇಳಿದರು.

Advertisement

ಕಾಲೇಜಿನ ಇಂಗ್ಲಿಷ್‌ ವಿಭಾಗ ಹಾಗೂ ಲಿಟರರಿ ಕ್ಲಬ್‌ ಜಂಟಿಯಾಗಿ ಆಯೋಜಿಸಿದ ಲಿಟರರಿ ಕ್ಲಬ್ಸ್ ಮೊದಲ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಆಲಿಸುವಿಕೆ, ಮಾತನಾಡುವಿಕೆ, ಓದುವುದು ಹಾಗೂ ಬರೆಯುವುದು ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ಕಷ್ಟ, ಅಸಾಧ್ಯ ಎಂಬ ಕೀಳರಿಮೆಯಿಂದ ಹೊರಬರಲು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಪ್ರಯತ್ನ ಹಾಗೂ ಶ್ರಮ ವಹಿಸುವುದು ಎರಡೂ ಅಗತ್ಯ. ಈ ಚಟುವಟಿಕೆಗಳಿಂದ ಸಿಗುವ ಅನುಭವ ವಿಷಯದ ಬಗೆಗಿನ ತಿಳಿವಳಿಕೆಯೊಂದಿಗೆ ಸಂವಹನ ಕೌಶಲವನ್ನು ಹೆಚ್ಚಿಸುತ್ತದೆ. ಇತರರ ಪ್ರತಿಕ್ರಿಯೆಯ ಬಗ್ಗೆ ಚಿಂತಿಸದೆ ನಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳುವುದರ ಕಡೆಗೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕಿ ಮೋತಿ ಬಾೖ ಮಾತನಾಡಿ, ಹೆದರಿಕೆಯನ್ನು ಮೆಟ್ಟಿ ನಿಲ್ಲುವುದನ್ನು ಕಲಿತುಕೊಳ್ಳಬೇಕು. ಇಂಗ್ಲಿಷ್‌ ಅಧ್ಯಾಪಕ ರಾಗುವುದು ಸುಲಭದ ಮಾತಲ್ಲ. ಒಳ್ಳೆಯ ಅಂಕ ಪಡೆಯುವುದೆ ಅಂತಿಮ ವಲ್ಲ. ಭಾಷಾ ಚಾತುರ್ಯವನ್ನು ಹೊಂದ ಬೇಕು. ನಮ್ಮ ಪ್ರಾವೀಣ್ಯ ನಮಗೆ ತೃಪ್ತಿ ನೀಡುವಂತಿರಬೇಕು. ಪರಿಶ್ರಮ ವಹಿಸಿ ಕೆಲಸ ಮಾಡುವುದರಿಂದ ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳಬಹುದು ಎಂದರು.

Advertisement

ಲಿಟರರಿ ಕ್ಲಬ್‌ ಸಂಚಾಲಕಿ, ಉಪ ನ್ಯಾಸಕಿ ರೇಖಾ ನಾಯರ್‌ ನೇತೃತ್ವದಲ್ಲಿ ಕ್ಲಬ್‌ ಪ್ರತಿನಿಧಿಗಳಾಗಿ ರಶ್ಮಿಕಾ, ಅನುಶ್ರೀ, ಕೃಪಾ, ಅಜಯ್‌, ಆಶಾ, ಸುಷ್ಮಾ ಎಂ.ಎಸ್‌., ವರ್ಷಿತಾ ಎಂ.ವಿ. ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಉಪನ್ಯಾಸಕಿ ಸರಸ್ವತಿ ಸಿ.ಕೆ., ಅಂಬಿಕಾ, ಉಪನ್ಯಾಸಕ ಗಣೇಶ್‌ ಪ್ರಸಾದ್‌ ಉಪಸ್ಥಿತರಿದ್ದರು.
ಅಂತಿಮ ಬಿ.ಎ. ವಿದ್ಯಾರ್ಥಿನಿ ವರ್ಷಿತಾ ಎಂ.ವಿ. ಸ್ವಾಗತಿಸಿ, ಪ್ರಥಮಾ ಎ. ಆರ್‌ ವಂದಿಸಿದರು. ನಮಿತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next