ಲೆಬನಾನ್: ಐಸಿಸ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಬು ಹಸನ್ ಅಲ್ ಹಶೀಮಿ ಅಲ್ ಖುರೇಷಿ ಸಂಘರ್ಷವೊಂದರಲ್ಲಿ ದುರಂತ ಅಂತ್ಯ ಕಂಡಿರುವುದಾಗಿ ವರದಿ ತಿಳಿಸಿದ್ದು, ನೂತನ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ:ಸುರತ್ಕಲ್: ಟೋಲ್ ಗೇಟ್ ಬಂದ್; ಉದ್ಯೋಗ ವಂಚಿತರಾದ 50ಕ್ಕೂ ಅಧಿಕ ಮಂದಿ
ದೇವರ ಶತ್ರುಗಳು ನಡೆಸಿದ ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬು ಹಶೀಮಿ ದುರಂತ ಅಂತ್ಯ ಕಂಡಿರುವುದಾಗಿ ಐಸಿಸ್ ವಕ್ತಾರ ಅಬು ಉಮರ್ ತಿಳಿಸಿದ್ದಾನೆ. ಆದರೆ ಹಶೀಮಿ ಸಾವಿನ ದಿನಾಂಕ ಮತ್ತು ನಿಖರ ಕಾರಣದ ವಿವರವನ್ನು ಬಹಿರಂಗಪಡಿಸಿಲ್ಲ.
ಆಡಿಯೋ ಸಂದೇಶದಲ್ಲಿ, ಐಸಿಸ್ ಉಗ್ರಗಾಮಿ ಸಂಘಟನೆಯ ನೂತನ ಮುಖ್ಯಸ್ಥನಾಗಿ ಅಬು ಅಲ್ ಹುಸೈನ್ ಅಲ್ ಹುಸೈನಿ ಅಲ್ ಖುರೇಷಿಯನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.
Related Articles
ನೂತನ ನಾಯಕನ ಬಗ್ಗೆ ಹೆಚ್ಚಿನ ಯಾವುದೇ ವಿವರವನ್ನು ಐಸಿಸ್ ವಕ್ತಾರ ನೀಡಿಲ್ಲ, ಆದರೆ ಈತ ಹಿರಿಯ ಜಿಹಾದಿ ಎಂದು ಕರೆದುಕೊಂಡಿದ್ದು, ಎಲ್ಲಾ ಜಿಹಾದಿ ಗುಂಪುಗಳು ಹುಸೈನಿಗೆ ನಿಷ್ಠರಾಗಿರಬೇಕು ಎಂದು ತಿಳಿಸಿದ್ದಾನೆ.