Advertisement

ಕಾಂಗ್ರೆಸ್‌ನಲ್ಲಿ ಮತ್ತೆ “ಗುಂಪು ಘರ್ಷಣೆ’

11:30 PM Sep 09, 2020 | mahesh |

ಜೈಪುರ: ರಾಜಸ್ಥಾನದ ಅಜ್ಮಿರ್‌ನ ಖಾಸಗಿ ಹೋಟೆಲೊಂದರಲ್ಲಿ ಕಾಂಗ್ರೆಸ್‌ನ ಫೀಡ್‌ಬ್ಯಾಕ್‌ ಸಭೆ ನಡೆಯುತ್ತಿದ್ದ ವೇಳೆ, ಕಾಂಗ್ರೆಸ್‌ನದ್ದೇ ಕೆಲವು ಕಾರ್ಯಕರ್ತರು ಹೋಟೆಲ್‌ನ ಹೊರಭಾಗದಲ್ಲಿ ಕಾಂಗ್ರೆಸ್‌ ನಾಯಕರ ಗುಂಪುಗಳ ನಡುವೆ ಗಲಭೆ ನಡೆದಿರುವ ಘಟನೆ ನಡೆದಿದೆ.

Advertisement

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಭುಗಿಲೆದ್ದಿದ್ದ ಭಿನ್ನಮತ ಶಮನಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷದ ಹಿರಿಯ ನಾಯಕ ಅಜಯ್‌ ಮಕೇನ್‌ ಅವರನ್ನು ಸಂಧಾನಕಾರರನ್ನಾಗಿ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಅಜ್ಮಿರ್‌ನ ಹೋಟೆಲೊಂದರಲ್ಲಿ ಮಕೇನ್‌ ನೇತೃತ್ವದಲ್ಲಿ ಪಕ್ಷದ ಶಾಸಕರ ಸಭೆ ನಡೆಸಲಾಗುತ್ತಿತ್ತು. ಅದೇ ವೇಳೆ, ಮಸುಧಾದ ಕಾಂಗ್ರೆಸ್‌ ಶಾಸಕ ರಾಕೇಶ್‌ ಪರೀಕ್‌ನ ಬೆಂಬಲಿಗರು, ಹೋಟೆಲ್‌ನ ಹೊರಗಡೆ ಹಾಕಲಾಗಿದ್ದ ಕಾಂಗ್ರೆಸ್‌ ಮುಖಂಡ ಹಾಗೂ ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಅವರ ಭಾವಚಿತ್ರವಿದ್ದ ಪೋಸ್ಟರನ್ನು ಹರಿದುಹಾಕಿ ದಾಂಧಲೆ ನಡೆಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು, ರಾಕೇಶ್‌ ಬೆಂಬಲಿಗರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬಿಡುಗಡೆಗೆ ಆಗ್ರಹಿಸಿ ರಾಕೇಶ್‌ ಅವರು ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತ ಪ್ರಸಂಗವೂ ನಡೆದಿದೆ. ಇದು, ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯನ್ನು ಸಾಬೀತುಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next