Advertisement
ಹೀಗಿರುವಾಗ ಅದೇ ಕಾಡಿನಲ್ಲಿ ನಾಯಕನಿಗೆ ವಿಭಿನ್ನ ಸ್ವಭಾವದ ಐವರು ಅಪರಿಚಿತರು ಪರಿಚಯವಾಗುತ್ತಾರೆ. ನಂತರ ಈ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗುತ್ತದೆ.ಈಐವರ ಜೊತೆ ಖುಷಿಯಿಂದ ದಿನ ಕಳೆಯುವುದರೊಳಗೆ, ಸಲೀಸಾಗಿ ಸಾಗುತ್ತಿದ್ದ ಚಿತ್ರದ ಕಥೆಗೆ ಅಲ್ಲೊಂದು ಅನಿರೀಕ್ಷಿತ ತಿರುವು ಸಿಗುತ್ತದೆ. ಇಂಟರ್ವಲ್ ವೇಳೆಗೆ ಆ ಐವರ ಜೊತೆಗಿದ್ದ ಹೀರೋ ಅವರ ನಿಜ ಮುಖವನ್ನು ನೋಡಿ ಬೆಚ್ಚಿ ಬೀಳುತ್ತಾನೆ! ಫ್ರೆಂಡ್ ಶಿಪ್, ಲವ್ ಟ್ರ್ಯಾಕ್‌ನಲ್ಲಿ ಸಾಗುತ್ತಿದ್ದ ಸಿನಿಮಾ ಹಾರರ್ ಟಚ್ತೆಗೆದುಕೊಳ್ಳುತ್ತದೆ. ಅದು ಯಾಕೆ? ಹೇಗೆ? ಅನ್ನೋದಕ್ಕೆ ಮಧ್ಯಂತರದ ನಂತರ ಉತ್ತರ ಸಿಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಗ್ರೂಫಿ’ ಚಿತ್ರದ ಕಥೆಯ ಸಣ್ಣ ವಿವರಣೆ. ಕಥೆ ಮುಂದೇನಾಗುತ್ತದೆ ಅನ್ನೋ ಕುತೂಹಲವಿದ್ದರೆ, ಅದನ್ನ ನೀವು ತೆರೆಮೇಲೆ ನೋಡುವುದೇ ಒಳಿತು.
ನಿಧಾನವಾಗಿ ಸಾಗಿದರೂ, ಮಧ್ಯಂತರದಲ್ಲಿ ಕಥೆಗೆ ಸಿಗುವ ಅನಿರೀಕ್ಷಿತ ತಿರುವು ಪ್ರೇಕ್ಷಕರನ್ನ ಚಿತ್ರದ ದ್ವಿತಿಯಾರ್ಧವನ್ನು ನೋಡುವಂತೆ ಮಾಡುತ್ತದೆ.
Related Articles
Advertisement
ಇನ್ನು ಚಿತ್ರದ ಬಹುತೇಕ ಕಲಾವಿದರು ಹೊಸಬರಾದರೂ, ಬಹುತೇಕ ಎಲ್ಲರದ್ದೂ ಅಚ್ಚುಕಟು r ಅಭಿನಯ. ಪೋಟೋ ಜರ್ನಲಿಸ್ಟ್ ಪಾತ್ರದಲ್ಲಿ ನಾಯಕ ಆರ್ಯನ್, ನಾಯಕಿ ಪದ್ಮಶ್ರೀ ಜೈನ್ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ನವಪ್ರತಿಭೆಗಳಾದ ಗಗನ್, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್ ತಮ್ಮ ಪಾತ್ರಗಳನ್ನು ಚೆನ್ನಾಗಿಅಭಿನಯಿಸಿದ್ದಾರೆ. ತಾಂತ್ರಿಕವಾಗಿ ಚಿತ್ರದ ಎರಡು ಹೈಲೈಟ್ ಅಂಶಗಳೆಂದರೆ, ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ. ವಿಜೇತ್ ಕೃಷ್ಣ ಸಂಗೀತ ಕೇಳುಗರ ಕಿವಿಯಲ್ಲಿ ಗುನುಗುಡುವಂತಿದ್ದು, ಛಾಯಾಗ್ರಹಣ ಪ್ರಕೃತಿ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದೆ. ಸಂಕಲನ ಕಾರ್ಯ ಅಲ್ಲಲ್ಲಿ ಸ್ವಲ್ಪ ಮಂದವಾದಂತೆ ಕಾಣುತ್ತದೆ. ಕೆಲವು ಸಣ್ಣಪುಟ್ಟಲೋಪಗಳನ್ನುಬದಿಗಿಟ್ಟು ನೋಡುವುದಾದರೆ, “ಗ್ರೂಫಿ’ ಒಂದು ಸಾಮಾಜಿಕ ಸಂದೇಶವನ್ನು ಇಟ್ಟುಕೊಂಡು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಮಾಡಿದ ಚಿತ್ರ ಎನ್ನಬಹುದು. ಬೆಚ್ಚಗೆಕೂತ ಪ್ರೇಕ್ಷಕರನ್ನು ಅಲ್ಲಲ್ಲಿ ಬೆಚ್ಚಿ ಬೀಳಿಸುವ “ಗ್ರೂಫಿ’ಯನ್ನ ಒಮ್ಮೆ ನೋಡಿಬರಲು ಅಡ್ಡಿಯಿಲ್ಲ. – ಜಿ.ಎಸ್.ಕೆ ಸುಧನ್