Advertisement
ಜಿಲ್ಲಾಡಳಿತ ಮತ್ತು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಹೊರಭಾಗದಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ಈ ಹಿಂದೆ ಕಾಂಪೌಂಡ್ ಹೊರ ಭಾಗದಲ್ಲಿ ಜಾಲಿ ಗಿಡ ಬೆಳೆಯುತ್ತಿದ್ದರಿಂದ ಜಿಲ್ಲಾಡಳಿತ ಭವನದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದವು. ಇದನ್ನುತಪ್ಪಿಸಲು ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಸುಮಾರು 300 ಮೀಟರ್ ಉದ್ದ 15 ಅಡಿಯಷ್ಟುಅಗಲದಷ್ಟು ಇಳಿಜಾರು ಮಾದರಿಯಲ್ಲಿ ಹುಲ್ಲುಗಾವಲು ಬೆಳೆಸಲಾಗಿದೆ. ಜತೆಗೆ ಜಿಲ್ಲಾಡಳಿತಭವನದ ಮುಖ್ಯ ಗೇಟ್‌ಗಳ ಎರಡೂ ಬದಿಯಲ್ಲಿಅಲಂಕಾರಿಕ ಗಿಡಗಳನ್ನು ಬಳಸಿ “ಜಿಲ್ಲಾಡಳಿತಭವನ ಗದಗ’ ಎಂದು ಬರೆಯಲಾಗಿದೆ. ಗಾರ್ಡನ್ ಸುತ್ತಲೂ ವಿವಿಧ ಗಿಡ ಬೆಳೆಸಿರುವುದು ದಾರಿ ಹೋಕರಿಗೆ ಮುದ ನೀಡುತ್ತಿವೆ.
Related Articles
Advertisement
ಈ ಹಿಂದೆ ಹೆದ್ದಾರಿಗಳಲ್ಲಿ ರಸ್ತೆ ಅಗಲೀಕರಣದಲ್ಲಿ ಕೊಡಲಿ ಪೆಟ್ಟಿಗೆ ಬಲಿಯಾಗುವ ಬೃಹತ್ ಮರಗಳ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಡಳಿತ ರಾಷ್ಟ್ರಮಟ್ಟದ ಪುರಸ್ಕಾರಕ್ಕೂಪಾತ್ರವಾಗಿತ್ತು. ಇದೀಗ ಜಿಲ್ಲಾಡಳಿತ ಭವನದ ಸೌಂದರ್ಯವೃದ್ಧಿಗಾಗಿ ಮತ್ತೂಮ್ಮೆ ಮರಗಳ ಸ್ಥಳಾಂತರ ಸಾಹಸಕ್ಕೆಕೈ ಹಾಕಿ, ಸೈ ಎನಿಸಿಕೊಂಡಿದೆ. ಬೇರೆಡೆ ಬೆಳೆದು ನಿಂತಿದ್ದಬೃಹತ್ ಮರ ತಂದು ಜಿಲ್ಲಾಡಳಿತ ಭವನದೆದುರು ಮರುನೆಡಲಾಗಿದೆ. ಐತಿಹಾಸಿಕ ಮಾದರಿಯಲ್ಲಿ ಬೃಹತ್ ಕಲ್ಲಿನಕಂಬಗಳೊಂದಿಗೆ ಬೃಹತ್ ಮರಗಳು ಜಿಲ್ಲಾಡಳಿತ ಭವನದಸೌಂದರ್ಯ ಇಮ್ಮಡಿಗೊಳಿಸಿವೆ. ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ಬೆಟಗೇರಿ ಅಂಬಾ ಭವಾನಿ ವೃತ್ತ ಹಾಗೂ ನಗರದ ಮಹಾತಾ ¾ಗಾಂಧಿ ವೃತ್ತದಲ್ಲಿ ಸುಮಾರು ಏಳೆಂಟು ದಶಕಗಳ ಹಿಂದೆ ಸುಂದರ ಕಲಾಕೃತಿಯ ಒಟ್ಟು 14 ಕಂಬ ಸ್ಥಾಪಿಸಲಾಗಿತ್ತು. ಆದರೆ ರಸ್ತೆ ಅಗಲೀಕರಣದಿಂದ ಅವು ನೆಲಕ್ಕುರುಳಿದ್ದವು. ಜಿಲ್ಲಾಧಿ ಕಾರಿ ಎಂ. ಸುಂದರೇಶ ಬಾಬು ವಿಶೇಷಪ್ರಯತ್ನದಿಂದ ಅವುಗಳನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜತೆಗೆ ಹಸಿರೀಕರಣಕ್ಕೆ ಒತ್ತು ನೀಡಿದ್ದರಿಂದ ಜಿಲ್ಲಾಡಳಿತ ಭವನ ಮತ್ತಷ್ಟು ಆಕರ್ಷಕವಾಗಿದೆ. ಇದಕ್ಕಾಗಿ 16 ಲಕ್ಷ ರೂ. ವೆಚ್ಚಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭವನದ ಒಳಾಂಗಣದಲ್ಲೂ ಹಸಿರೀಕರಣ ಕಾಮಗಾರಿ ಕೈಗೊಳ್ಳಲಾಗುವುದು. – ಶ್ರೀನಿವಾಸ ಶಿರೋಳ, ನಿರ್ಮಿತಿ ಕೇಂದ್ರದ ಅಧಿಕಾರಿ