Advertisement
29 ಸಾವಿರ ಚದರ ಅಡಿ ವಿಸ್ತೀರ್ಣದ ಈ ಯೋಜನೆಯಲ್ಲಿ ನೆಲ ಸಹಿತ ಒಟ್ಟು ಮೂರು ಅಂತಸ್ತಿನ ಯೋಜನೆ ಇದಾಗಿದೆ. 8,200 ಚದರ ಅಡಿಯ ನೆಲ ಮಹಡಿಯಲ್ಲಿ ವಿಶಾಲ ಪಾರ್ಕಿಂಗ್, 8925 ಚದರ ಅಡಿ ವಿಸ್ತೀರ್ಣದ ಪ್ರಥಮ ಮಹಡಿಯಲ್ಲಿ ಅನ್ನಛತ್ರ, 8,800 ಚದರ ಅಡಿ ವಿಸ್ತೀರ್ಣದ ದ್ವಿತೀಯ ಮಹಡಿಯಲ್ಲಿ ಸಭಾಂಗಣ, ಮೂರನೇ ಮಹಡಿಯಲ್ಲಿ ಬಾಲ್ಕನಿ ನಿರ್ಮಾಣವಾಗಲಿದೆ. 2014ರಲ್ಲಿ ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ, ನೆಲ, ಪ್ರಥಮ ಅಂತಸ್ತಿನ ಕಟ್ಟಡ ರಚನೆ ಪೂರ್ಣಗೊಂಡಿತ್ತು. ಕಾರಣಾಂತರಗಳಿಂದ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ. ಅನ್ನಛತ್ರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಮಹಾದಾನವಾಗಿ ಎರಡು ಲಕ್ಷಕ್ಕಿಂತ ಅಧಿಕ ಮೊತ್ತ ದೇಣಿಗೆ ನೀಡಿದವರ ಭಾವಚಿತ್ರವನ್ನು ಹಾಕಲಾಗುವುದು. ಉಳಿದ ದಾನಿಗಳ ಹೆಸರು, ಮೊತ್ತವನ್ನು ಅಮೃತಶಿಲೆಯಲ್ಲಿ ಕೆತ್ತಲಾಗುವುದು.
Related Articles
Advertisement
ಸಾರ್ವಜನಿಕರ ಸಹಕಾರ ಮುಖ್ಯ
ದೇವಾಲಯದ ನಿರ್ಮಾಣದ ವೇಳೆ ದೇಗುಲಕ್ಕೆ ಸಂಬಂಧಪಟ್ಟ ವಸ್ತುಗಳು ದೊರೆತಿದ್ದವು. ಪ್ರಾಕೃತಿಕ ಏರುಪೇರುಗಳಿಂದ ದೇವರ ಗುಡಿ ನಾಶವಾಗಿರಬಹುದು. ತದನಂತರ ವಾಸುದೇವ ರಾಯರು ದೇವಾಲಯ ಸ್ಥಾಪಿಸಿದರೂ ಭಕ್ತರ ನೆರವಿನಿಂದ ದೇವತಾ ಪ್ರತಿಷ್ಠಾಪನೆ, ಪೂಜೆ ಪುನಸ್ಕಾರ, ಬ್ರಹ್ಮಕಲಶೋತ್ಸವ ನಡೆದಿರುತ್ತದೆ. ಇದೀಗ ಮಹತ್ವಾಕಾಂಕ್ಷೆಯ ಸಭಾಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು.
–ನದೆಳ್ಳ ಸಾಂಬಶಿವರಾವ್, , ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಶ್ರೀಕುರು ಅಂಬಾ ರಾಜರಾಜೇಶ್ವರೀ ದೇವಸ್ಥಾನ