Advertisement
ಇದಕ್ಕೆ ಅಗತ್ಯವಾದ ಸಸಿಗಳನ್ನು ತಿರುವ ನಂತಪುರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಕಾರ ಬೆಳೆಸಲಾಗುತ್ತಿದೆ. ಇದರ ಹೊರತಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಸಿಗಳನ್ನು ಬೆಳೆಸಿ ಯೋಜನೆಯನ್ನು ಬಲಪಡಿಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆ ಪ್ರಕಾರ ಆಯಾ ಜಿಲ್ಲೆಗಳ ಪ್ರೋಗ್ರಾಂ ಕೋರ್ಡಿನೇಟರ್‌ಗಳಿಗೆ ಇದರ ಹೊಣೆಗಾರಿಕೆ ನೀಡಲಾಗಿದೆ.
ಸಸಿಗಳನ್ನು ಸಂರಕ್ಷಿಸಲು ಕೃಷಿ ಅಧಿ ಕಾರಿಗಳ ಸಹಾಯವೂ ಲಭಿಸುವುದು. ಫಲವೃಕ್ಷ ಸಸಿಗಳನ್ನು ಕೂಡ ವಿತರಿಸಲು ತೀರ್ಮಾನಿಸಲಾಗಿದೆ.