Advertisement

ಗ್ರೀನ್‌ ಕಾರ್ಡ್‌ ಇನ್ನು ಸುಲಭ?: ಹೊಸ ಮಸೂದೆ ಅಂಗೀಕಾರಗೊಂಡರೆ ಇದು ಸಾಧ್ಯ

11:05 PM Sep 13, 2021 | Team Udayavani |

ವಾಷಿಂಗ್ಟನ್‌: ಭಾರತೀಯರೂ ಸೇರಿ ದಂತೆ ಅಮೆರಿಕದ ಗ್ರೀನ್‌ಕಾರ್ಡ್‌ಗಾಗಿ ಕಾಯುತ್ತಿರುವ ಲಕ್ಷಾಂತರ ಮಂದಿಗೆ ನೆಮ್ಮದಿಯ ಸುದ್ದಿಯೊಂದನ್ನು ಅಲ್ಲಿನ ಸರಕಾರ ನೀಡಿದೆ. ಇದಕ್ಕೆ ಸಂಬಂಧಿಸಿದ ಮಸೂದೆವು ಅಂಗೀಕಾರಗೊಂಡು, ಕಾನೂನಾಗಿ ರೂಪುಗೊಂಡರೆ, ಗ್ರೀನ್‌ಕಾರ್ಡ್‌ಗಾಗಿ ಕಾಯುತ್ತಿರುವವರು ಪೂರಕ ಶುಲ್ಕವನ್ನು ಪಾವತಿಸಿ, ಕಾನೂ ನಾತ್ಮಕ ಕಾಯಂ ವಾಸದ ಅವಕಾಶ ಪಡೆಯಲಿದ್ದಾರೆ.

Advertisement

ಇದರಿಂದಾಗಿ ಭಾರತದ ಸಾವಿರಾರು ಐಟಿ ವೃತ್ತಿಪರರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ಗ್ರೀನ್‌ ಕಾರ್ಡ್‌ ಎಂದರೆ ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಅವಕಾಶ ಕಲ್ಪಿಸಿ ವಿತರಿಸಲಾಗುವ ಕಾರ್ಡ್‌. ಈಗ ಸರಕಾರ ಪ್ರಸ್ತಾವಿಸಿರುವ ಮಸೂದೆಯು ಕಾನೂನಾಗಿ ಮಾರ್ಪಾ ಡಾ ಗುವ ಮುನ್ನ ನ್ಯಾಯಾಂಗ ಸಮಿತಿ, ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ ಮತ್ತು ಸೆನೆಟ್‌ನಲ್ಲಿ ಅಂಗೀಕಾರಗೊಂಡು, ಅಧ್ಯಕ್ಷರ ಅಂಕಿತ ಪಡೆಯಬೇಕಾಗುತ್ತದೆ.

ಇದು ಕಾನೂನಾಗಿ ರೂಪುಗೊಂಡ ಬಳಿಕ ಅಮೆರಿಕದಲ್ಲಿರುವ ವಲಸಿಗರು 5 ಸಾವಿರ ಯುಎಸ್‌ ಡಾಲರ್‌(3.68 ಲಕ್ಷ ರೂ.) ಅನ್ನು ಪೂರಕ ಶುಲ್ಕವಾಗಿ ಪಾವ ತಿಸಿ, ಗ್ರೀನ್‌ ಕಾರ್ಡ್‌ ಪಡೆಯಬಹು ದಾಗಿದೆ. ವಲಸಿಗ ಹೂಡಿಕೆದಾರರಿಗೆ (ಇಬಿ-5 ಕೆಟಗರಿಯಲ್ಲಿ ಬರುವವರು) ಈ ಮೊತ್ತ 50 ಸಾವಿರ ಡಾಲರ್‌ (36.86 ಲಕ್ಷ ರೂ.) ಆಗಿರುತ್ತದೆ.

ಈ ಅವಕಾಶವು 2031ರಲ್ಲಿ ಮುಗಿಯ ಲಿದ್ದು, ಅದರೊಳ ಗಾಗಿ ಹಣ ಪಾವತಿಸಿ ಅಮೆರಿಕದ ಕಾಯಂ ವಾಸಿಗಳಾಗಬ ಹುದು. ಇನ್ನು, ಅಮೆರಿಕದ ನಾಗರಿಕ ನಿಂದ ಪ್ರಾಯೋಜ ಕತ್ವ ಪಡೆದು ಬಂದಿ ರುವ ಕುಟುಂಬ ಆಧರಿತ ವಲಸಿಗ 2500 ಡಾಲರ್‌(1.84 ಲಕ್ಷ ರೂ.) ಪಾವತಿಸಿ ಗ್ರೀನ್‌ ಕಾರ್ಡ್‌ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next