Advertisement

Green Card: ಭಾರತೀಯ ಮಕ್ಕಳಿಗೆ ಪೋಷಕರಿಂದ ಪ್ರತ್ಯೇಕಗೊಳ್ಳುವ ಆತಂಕ

09:56 PM Sep 04, 2023 | Team Udayavani |

ವಾಷಿಂಗ್ಟನ್‌: ಗ್ರೀನ್‌ ಕಾರ್ಡ್‌ ಅನುಮೋದನೆಗೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ತಮ್ಮ ಪೋಷಕರಿಂದ ಪ್ರತ್ಯೇಕಗೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

Advertisement

ಉದ್ಯೋಗ ಆಧಾರಿತ ಗ್ರೀನ್‌ ಕಾರ್ಡ್‌ ಪಡೆಯಲು 10.7 ಲಕ್ಷಕ್ಕೂ ಅಧಿಕ ಭಾರತೀಯರು ಸಾಲಿನಲ್ಲಿ ಕಾಯುತ್ತಿದ್ದಾರೆ. ಅಮೆರಿಕದಲ್ಲಿ ಕಾನೂನುಬದ್ಧ ಶಾಶ್ವತ ವಾಸ್ತವ್ಯಕ್ಕಾಗಿ ಗ್ರೀನ್‌ ಕಾರ್ಡ್‌ ಅವಶ್ಯಕ.ಪ್ರತಿ ದೇಶಕ್ಕೆ ವರ್ಷಕ್ಕೆ ಶೇ.7ರಷ್ಟು ಮಾತ್ರ ಗ್ರೀನ್‌ ಕಾರ್ಡ್‌ ವಿತರಣೆ ನಿಯಮವನ್ನು ಅಮೆರಿಕ ಸರ್ಕಾರ ರೂಪಿಸಿದೆ. ಇದರಿಂದ ಗ್ರೀನ್‌ ಕಾರ್ಡ್‌ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಇವೆ. ಅಂದಾಜಿನ ಪ್ರಕಾರ, ಈಗಿರುವ ನಿಯಮಗಳ ಪ್ರಕಾರ, ಸದ್ಯ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಬರೋಬ್ಬರಿ 135 ವರ್ಷಗಳು ಬೇಕಾಗಲಿದೆ. ಎಚ್‌-4 ವೀಸಾ ವ್ಯವಸ್ಥೆಯಡಿಯಲ್ಲಿ 21 ವರ್ಷದೊಳಗಿನ ವ್ಯಕ್ತಿಗಳು ಅಮೆರಿಕದಲ್ಲಿ ಉಳಿಯಲು ಅನುಮತಿ ಇದೆ.

“ಗ್ರೀನ್‌ ಕಾರ್ಡ್‌ ಅರ್ಜಿಗಳು ವಿಲೇವಾರಿ ಆಗುವ ವೇಳೆಗೆ, ಎಚ್‌-4 ವೀಸಾ ಅಡಿಯಲ್ಲಿ ಅಮೆರಿಕದಲ್ಲಿರುವ 1.34 ಲಕ್ಷಕ್ಕೂ ಅಧಿಕ ಭಾರತೀಯ ಮಕ್ಕಳಿಗೆ ಅವರ ಜೀವಿತಾವಧಿಯೇ ಮುಗಿದಿರುತ್ತದೆ’ ಎಂದು ವಾಷಿಂಗ್ಟನ್‌ನ ಕ್ಯಾಟೊ ಇನ್ಸ್‌ಸ್ಟಿಟ್ಯೂಟ್‌ನ ಡೇವಿಡ್‌ ಜೆ. ಬಿಯರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next