Advertisement

ಕಾಡಿದ Depression: 16ನೇ ಮಹಡಿಯಿಂದ 6 ತಿಂಗಳ ಮಗುವಿನೊಂದಿಗೆ ಹಾರಿ ಮಹಿಳೆ ಆತ್ಮಹತ್ಯೆ

03:30 PM Jan 11, 2024 | Team Udayavani |

ನೋಯ್ಡಾ: ತಾಯಿಯೊಬ್ಬಳು ತನ್ನ 6 ತಿಂಗಳ ಮಗುವಿನೊಂದಿಗೆ 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಬುಧವಾರ ರಾತ್ರಿ (ಜ.10 ರಂದು) ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

Advertisement

ಬುಧವಾರ ತಡರಾತ್ರಿ ಲಾ ರೆಸಿಡೆನ್ಶಿಯಾ ಸೊಸೈಟಿಯ ಟವರ್ 2 ರಿಂದ ಬೀಳುವ ದೊಡ್ಡ ಶಬ್ದ ಕೇಳಿಸಿ, ಅಲ್ಲಿನ ಸಿಬ್ಬಂದಿ ಆಗಮಿಸಿದಾಗ ರಕ್ತದ ಮಡುವಿನಲ್ಲಿ ಮಹಿಳೆ ಹಾಗೂ ಮಗು ಬಿದ್ದಿರುವುದನ್ನು ನೋಡಿದ್ದಾರೆ. ತಾಯಿ ಸಾರಿಕಾ (33) ಹಾಗೂ ಅವರ 6 ತಿಂಗಳ ಮಗಳು ಗಂಭೀರ ಗಾಯಗೊಂಡಿದ್ದು‌, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಸಾರಿಕಾ ಅನಾರೋಗ್ಯದಿಂದ ಬಳಲುತ್ತಿದ್ದು, ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೃತಳ ಸಂಬಂಧಿಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next