ನೊಯ್ಡಾ : ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಲೌಡ್ ಮ್ಯೂಸಿಕ್ ನ್ನು ಹಾಕಿದ ಹಿನ್ನೆಲೆಯಲ್ಲಿ ಆಕ್ಷೇಪಿಸಿದ 30 ವರ್ಷದ ಮಹಿಳೆಯೊರ್ವರಿಗೆ ಕಿರುಕುಳ ನೀಡಿದ ಕಾರಣಕ್ಕಾಗಿ ನಾಲ್ವರು ಪುರುಷರನ್ನು ಬಂಧಿಸಿದ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.
ಸೋಮವಾರ(ಫೆ.1) ಸಂಜೆ ನಡೆದ ಘಟನೆಯ ಬಗ್ಗೆ ಮಂಗಳವಾರ(ಫೆ.2)ದಂದು ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಗೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ಗೆಲುವಿನ ನಗೆ ಬೀರಿದ ರಾಮಾರ್ಜುನ: ಅನೀಶ್ ಮೊಗದಲ್ಲಿ ನಗು
ಮೊದಲಿಗೆ ನಾವು ಆ ಗಟ್ಟಿಯಾಗಿ ಹಾಕಲಾಗಿದ್ದ ಮ್ಯೂಸಿಕನ್ನು ನಿರ್ಲಕ್ಷಿಸುವುದಕ್ಕೆ ಪ್ರಯತ್ನೆ ಪಟ್ಟೆವು. ಅದಾಗ್ಯೂ, ನಾವು ಅವರಲ್ಲಿ ಮ್ಯೂಸಿಕನ್ನು ನಿಲ್ಲಿಸಲು ಕೇಳಿಕೊಂಡೆವು. ಆದರೇ, ಅವರು ನಮ್ಮನ್ನು ವಿರೋಧಸಿದರು. ಅವರು ನನ್ನ ಮತ್ತು ನನ್ನ ಗಂಡನೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ನಮ್ಮನ್ನು ಹೊಡೆಯುವುದಕ್ಕೆ ಮುಂದಾದರು. ನನ್ನ ಕೈ ಹಿಡಿದು ಕಿರುಕುಳ ನೀಡಿದರು ” ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು, ಮಹಿಳೆಯ ಮಣಿಗಂಟಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿದಾರರ ನಾಲ್ವರು ಆರೋಪಿಗಳನ್ನು ಲೇಬರ್ ಚೌಕ್ ಬಳಿ ಬಂಧಿಸಲಾಗಿದೆ ”ಎಂದು ಬಿಸ್ರಾಖ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಸದ್ಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 452 (ಮನೆ ಅತಿಕ್ರಮಣ), 323 (ಬಲವಂತವಾಗಿ ನೋವನ್ನುಂಟುಮಾಡಿದ ಶಿಕ್ಷೆ) ಮತ್ತು 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓದಿ : ರೇಷ್ಮೆ ಜತೆ ದೀಪಾವಳಿ..! ಬಹುಮಾನ ವಿತರಣೆ ಕಾರ್ಯಕ್ರಮ