ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಕೊಲಿಜಿಯಂ ಶುಕ್ರವಾರ ಅತ್ಯಂತ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ದಿವ್ಯಾಂಗ (ದೈಹಿಕ ವಿಕಲಾಂಗತೆ) ನ್ಯಾಯವಾದಿಯೊಬ್ಬರನ್ನು ಹೈಕೋರ್ಟ್ ಜಡ್ಜ್ ಆಗಿ ಪದೋನ್ನತಿ ನೀಡಿದೆ!
ದಿವ್ಯಾಂಗರಾಗಿರುವ ವಕೀಲೆ ಮೋಕ್ಸಾ ಕಿರಣ್ ಥಕ್ಕರ್ ಅವರನ್ನು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದೆ. ಈ ನೇಮಕದಿಂದ ವಕೀಲೆ ಥಕ್ಕರ್ ಅವರಿಗೆ ತಮ್ಮ ದೈಹಿಕ ಅಸಮರ್ಥತೆಯಿಂದ ಹೊರಬರಲು ಸಾಧ್ಯ ವಾಗುವುದು ಎಂದು ಹೇಳಿದೆ.
ಅಲ್ಲದೆ, ಪರಿಶಿಷ್ಟ ಪಂಗಡದ ವಕೀಲ ಕರ್ಡಕ್ ಏಟೆ ಅವರನ್ನು ಗುವಾಹಟಿ ಹೈಕೋರ್ಟ್‌ಗೆ, ವಿಚಾರಣ ನ್ಯಾಯಾಲಯದ ವಕೀಲ ದೇವನ್ ಮಹೇಂದ್ರಭಾಯಿ ದೇಸಾಯಿ ರನ್ನು ಗುಜರಾತ್ ಹೈಕೋರ್ಟ್ ಜಡ್ಜ್ ಆಗಿ ನೇಮಿಸಲು ಶಿಫಾರಸು ಮಾಡಿದೆ.