Advertisement

ಲಿಂಗಸುಗೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

03:58 PM Nov 30, 2021 | Team Udayavani |

ಲಿಂಗಸುಗೂರು: ಕಿಲ್ಲಾರಹಟ್ಟಿ ಗ್ರಾಮದ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅವಮಾನವೀಯ ಘಟನೆ ಮನುಕುಲವೇ ತಲೆತಗ್ಗಿಸುವಂತಾಗಿದೆ. ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿಬೇಕು ಹಾಗೂ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ ಪೊಲೀಸ್‌ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಿಸಿ ದಲಿತ ಹಾಗೂ ಜನಪರ ಸಂಘಟನೆ ವೇದಿಕೆ ಸೋಮವಾರ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬಂದ್‌ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟು ಮುಚ್ಚಿದ್ದವು. ವಾಹನ ಸಂಚಾರ ಎಂದಿನಂತಿತ್ತು, ಶಾಲಾ-ಕಾಲೇಜು ಕಾರ್ಯ ನಿರ್ವಹಿಸಿದವು. ಡಿವೈಎಸ್ಪಿ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಚೆ ಕಚೇರಿ, ಗಡಿಯಾರ ವೃತ್ತದ ಮೂಲಕ ಬಸ್‌ ನಿಲ್ದಾಣ ವೃತ್ತಕ್ಕೆ ಬಂದು ತಲುಪಿತು. ಕಿಲ್ಲಾರಹಟ್ಟಿ ಪ್ರಕರಣದ ಎಲ್ಲ ದೂರು ದಾಖಲಾಗಬೇಕು. ಎಲ್ಲ ಆರೋಪಿತರನ್ನು ಬಂಧಿಸಬೇಕು. ಹಲ್ಲೆಗೊಳಗಾದ ಕುಟಂಬಕ್ಕೆ ಶಾಸನ ಬದ್ಧ ಪರಿಹಾರ ನೀಡಬೇಕು. ಪ್ರಕರಣದ ತನಿಖಾಧಿಕಾರಿಗಳಾಗಿ ಕರ್ತವ್ಯ ಮರೆತ ಮುದಗಲ್‌ ಪಿಎಸ್‌ಐ, ಎಎಸ್‌ಐ, ಮಸ್ಕಿ ಸಿಪಿಐ, ರಾಯಚೂರು ಮಹಿಳಾ ಠಾಣೆ ಸಿಪಿಐ ಹಾಗೂ ಲಿಂಗಸುಗೂರು ಡಿವೈಎಸ್ಪಿ ಮೇಲೆ ಇಲಾಖೆಯಿಂದ ಕಠಿಣ ಕ್ರಮ ಜರಗಿಸಬೇಕು, ಜಿಲ್ಲೆಯಲ್ಲಿ ದಲಿತರಿಗೆ ಪ್ರವೇಶ ನೀಡದ ಹೋಟೆಲ್‌, ಕ್ಷೌರದಂಗಡಿ, ದೇವಸ್ಥಾನ, ಕುಡಿವ ನೀರಿನ ಬಾವಿ ಮುಚ್ಚಿಸಬೇಕು ಎಂದು ಆಗ್ರಹಿಸಿದರು.

ಜಾತಿ ತಾರತಮ್ಯ ಆಚರಣೆ ಸಾಮಾಜಿಕ ಅಪರಾಧವೆಂದು ಜಿಲ್ಲೆಯಲ್ಲಿ ಜನಜಾಗೃತಿ ಆಂದೋಲನಕ್ಕೆ ಪೊಲೀಸ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಮುಂದಾಗಬೇಕು. ಮುಂದಿನ ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳನ್ನು ಅಸ್ಪೃಶ್ಯತೆ ಹಾಗೂ ಜಾತಿ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಎಲ್ಲ ಭೂ ರಹಿತ ಎಸ್‌ಸಿ, ಎಸ್‌ಟಿ ಕುಟಂಬಗಳಿಗೆ ಸರ್ಕಾರ ಭೂಮಿ ವಿತರಿಸಲು ಆಯಾ ತಹಶೀಲ್ದಾರ್‌ಗೆ ವಿಶೇಷ ಕರ್ತವ್ಯಕ್ಕೆ ನೇಮಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಿ. ದಾನಪ್ಪ, ಎ. ಬಾಲಸ್ವಾಮಿ ಕೊಡ್ಲಿ, ಹನುಮಂತಪ್ಪ ಕುಣಿಕೆಲ್ಲೂರು, ದೊಡ್ಡಪ್ಪ ಮುರಾರಿ, ಲಿಂಗಪ್ಪ ಪರಂಗಿ, ಚಿನ್ನಪ್ಪ ಕೊಟ್ರಕಿ, ಚಿನ್ನಪ್ಪ ಕಂದಳ್ಳಿ, ಎಚ್‌.ಎನ್‌. ಬಡಿಗೇರ, ಬಸವರಾಜ ಸಾಸಲಮರಿ, ಯಲ್ಲಾಲಿಂಗ, ಅನೀಲಕುಮಾರ, ಶಿವಪ್ಪ ಮಾಚನೂರು, ದುರಗಪ್ಪ ಅಗ್ರಹಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next