Advertisement

ಎಲ್‌ಐಸಿ ಐಪಿಒಗೆ ಭರ್ಜರಿ ಸ್ಪಂದನೆ

01:08 AM May 05, 2022 | Team Udayavani |

ಹೊಸದಿಲ್ಲಿ: ಭಾರೀ ನಿರೀಕ್ಷೆ ಹುಟ್ಟಿಸಿರುವ ಸಾರ್ವಜನಿಕ ವಲಯದ ಭಾರತೀಯ ಜೀವ ವಿಮಾ ನಿಗಮದ ಐಪಿಒಗೆ ಮೊದಲ ದಿನವೇ ಭಾರೀ ಯಶಸ್ಸು  ಸಿಕ್ಕಿದ್ದು, ಒಟ್ಟಾರೆ ಶೇ. 66ರಷ್ಟು ಸಬ್‌ಸ್ಕ್ರಿಪ್ಶನ್‌ ಆಗಿದೆ.

Advertisement

ಪಾಲಿಸಿದಾರರ ವಿಭಾಗದಲ್ಲಿ 1.9 ಪಟ್ಟು ಹೆಚ್ಚು ಸ್ಪಂದನೆ ಸಿಕ್ಕಿದೆ.  ಉದ್ಯೋಗಿಗಳ ವಿಭಾಗದಲ್ಲಿ ಸಂಪೂರ್ಣ ಸಬ್‌ಸ್ಕ್ರಿಪ್ಶನ್‌ ಆಗಿದೆ ಎಂದು ಬಿಎಸ್‌ಇನಲ್ಲಿ ಸಿಕ್ಕ ಮಾಹಿತಿ ಹೇಳಿದೆ.

ಈಗ ರಿಟೇಲ್‌ ಹೂಡಿಕೆದಾರರು, ಅರ್ಹ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಅವಕಾಶ ಮಾಡಿಕೊಡಲಾಗಿದೆ.  ರಿಟೇಲ್‌ ಹೂಡಿಕೆದಾರರೇ ಶೇ.50ರಷ್ಟು ಷೇರು ಖರೀದಿಸಿದ್ದಾರೆ.

ಸರಕಾರ ಈಗ ಒಟ್ಟಾರೆ 22.13 ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ. ಮೇ 17ರಂದು ಬಾಂಬೆ ಷೇರುಪೇಟೆಯಲ್ಲಿ ಲಿಸ್ಟ್‌ ಆಗಲಿದ್ದು, ಎಲ್ಲ ಷೇರುದಾರರಿಗೂ ಅಂದಿನಿಂದಲೇ ಸಿಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next