Advertisement

ಭೂವಿಜ್ಞಾನ ಅಧ್ಯಯನದಲ್ಲಿ ಸಂಶೋಧನೆಗೆ ವಿಪುಲ ಅವಕಾಶ : ಡಾ|ಗಂಗಾಧರ್‌ ಭಟ್‌

11:49 PM Nov 13, 2019 | Sriram |

ಉಡುಪಿ: ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಭೂ ವಿಜ್ಞಾನದಲ್ಲಿ ಉನ್ನತಮಟ್ಟದ ಸಂಶೋಧನೆ ನಡೆಸಲು ವಿಪುಲ ಅವಕಾಶವಿದೆ ಎಂದು ಮಂಗಳೂರು ವಿವಿ ಭೂ ಸಾಗರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಎಚ್‌. ಗಂಗಾಧರ್‌ ಭಟ್‌ ತಿಳಿಸಿದರು.

Advertisement

ಉಡುಪಿ ವಿಜ್ಞಾನ ಫೌಂಡೇಶನ್‌ ಫಾರ್‌ ಇನ್ನೋವೇಶನ್‌ ರಿಸರ್ಚ್‌ ಹಾಗೂ ಬೆಳ್ಳಾರೆ ಜಿಐಎಸ್‌ ಇಂಡಿಯಾ ಪ್ರೈ.ಲಿ. ಸಹಯೋಗದಲ್ಲಿ ಬುಧವಾರ ಉಡುಪಿ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜಿಐಎಸ್‌ (ಜಿಯೊಗ್ರಫಿಕ್‌ ಇನಾ#ರ್ಮೆಶನ್‌ ಸಿಸ್ಟಮ್‌) ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೂ ವಿಜ್ಞಾನ (ಅರ್ತ್‌ ಸೈನ್ಸ್‌- ಜಿಯಾಲಜಿ)ದಲ್ಲಿ ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆದವರಿಗೆ ಹಲವು ಉದ್ಯೋಗಾವಕಾಶಗಳು ಕಾಯುತ್ತಿವೆ. ಪ್ರಸ್ತುತ ರಿಮೋಟ್‌ ಸೆನ್ಸಿಂಗ್‌ ಅಪ್ಲೀಕೇಶನ್ಸ್‌ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ ಉಪಗ್ರಹಗಳ ಛಾಯಾಚಿತ್ರ ಅಧ್ಯಯನ, ಭೂಮಿಯ ಮೇಲ್ಮೆ„ ಲಕ್ಷಣಗಳನ್ನು ಇದರ ಸಹಾಯದಿಂದ ಅಧ್ಯಯನ ನಡೆಸಿ ನಕ್ಷೆ ತಯಾರಿಸಬಹುದು. ಈ ವಿಷಯದಲ್ಲಿ ಉನ್ನತ ಮಟ್ಟದಲ್ಲಿ ಸಂಶೋಧನೆ ನಡೆಸಿದ ವರು ಇಸ್ರೊ, ನಾಸಾದಲ್ಲಿ ಕೆಲಸ ನಿರ್ವಹಿಸ ಬಹುದು. ಪೆಲೆಂಟೊಲಜಿ ಪಳಿಯುಳಿಕೆಗಳ ಅಧ್ಯಯನಕ್ಕೆ ಸಹಕಾರಿ. ಭೂಮಿಯ ಕಾಲ ಮಾನ, ಅಲ್ಲಿಂದ ಇಲ್ಲಿವರೆಗೆ ಆಗಿರುವ ಭೂಮಿ ಮೇಲ್ಮೆ„ ಲಕ್ಷಣಗಳು, ಭೂ ಇತಿಹಾಸ ಗಳನ್ನು ಅರಿಯಬಹದು ಎಂದರು.

ಉಪಗ್ರಹ ತಂತ್ರಜ್ಞಾನದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಡಿದ ಸಾಧನೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಉಡುಪಿ ನಗರದ ಅಸುಪಾಸಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಜ್ಞಾನ ಫೌಂಡೇಶನ್‌ ಫಾರ್‌ ಇನ್ನೋವೇಶನ್‌ ರಿಸರ್ಚ್‌ ನಿರ್ದೇಶಕ ಡಾ| ನವೀನ್‌ ಚಂದ್ರ, ಪಿಎಚ್‌ಡಿ ವಿದ್ಯಾರ್ಥಿನಿ ಶಾನೆನ್‌ ಪಿಂಟೋ, ಜಿಐಎಸ್‌ ವಿಶ್ಲೇಷಕ ಶಿವಪ್ರಸಾದ್‌ ಉಪಸ್ಥಿತರಿದ್ದರು. ಫೌಂಡೇಶನ್‌ ನಿರ್ದೇಶಕ ಡಾ| ಫ್ರಾನ್ಸಿನ್‌ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next