ಬೆಂಗಳೂರು: ಜುಲೈ ಒಂದರಿಂದ ಶುರುವಾಗಲಿರುವ ಕರ್ನಾಟಕ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಲೀಗ್‌ಗಾಗಿ ಆಟಗಾರರ ಹರಾಜು ರವಿವಾರ ನಡೆಯಲಿದೆ.
ಈ ಹರಾಜಿನಲ್ಲಿ 200 ಆಟಗಾರರು ಪಾಲ್ಗೊಳ್ಳಲಿದ್ದಾರೆ. ವಿದೇಶಿ ಆಟಗಾರರು, ಮಹಿಳೆಯರೂ ಈ ಲೀಗ್‌ನಲ್ಲಿ ಆಡಲಿದ್ದಾರೆ.
ಒಂದು ತಂಡದಲ್ಲಿ ಗರಿಷ್ಠ 8 ಮಂದಿಯಿರುತ್ತಾರೆ. ಇದರಲ್ಲಿ ಒಬ್ಬರು ಐಕಾನ್ ಆಟಗಾರರು ಇರುತ್ತಾರೆ. ಕನಿಷ್ಠ ಇಬ್ಬರು ಟೈಯರ್-1, ಟೈಯರ್-2 ಆಟಗಾರರು ಇರಬೇಕು. ಇಬ್ಬರು ಮಹಿಳಾ ಆಟಗಾರರು ಇರಲೇಬೇಕು. ಈ ಮಹಿಳಾ ಆಟಗಾರರ ಪೈಕಿ ಒಬ್ಬರು ಐಕಾನ್ ಆಗಿದ್ದರೂ ಸರಿ. ಪ್ರತೀ ತಂಡಕ್ಕೆ ಒಬ್ಬರು ಮೆಂಟರ್ ಇರುತ್ತಾರೆ.
ಕೆ. ಶ್ರೀಕಾಂತ್, ಸಾಯಿ ಪ್ರಣೀತ್, ಅಶ್ವಿನಿ ಪೊನ್ನಪ್ಪ, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಎಚ್.ಎಸ್.ಪ್ರಣಯ್, ಪಿ.ವಿ.ಸಿಂದು, ಜ್ವಾಲಾ ಗುಟ್ಟಾ ಮೆಂಟರ್ ಪಾತ್ರ ನಿರ್ವಹಿಸುತ್ತಾರೆ.
Related Articles
ಒಂದು ತಂಡ ಆಟಗಾರರನ್ನು ಖರೀದಿಸಲು ಗರಿಷ್ಠ 12 ಲಕ್ಷ ರೂ.ಗಳನ್ನು ಬಳಸಬಹುದು.