Advertisement

ಅದ್ಧೂರಿ ಆದಿಶೇಷನ ಜಾತ್ರಾ ಮಹೋತ್ಸವ

04:36 PM Aug 24, 2022 | Team Udayavani |

ಸಿಂಧನೂರು: ಇಲ್ಲಿನ ಕಿತ್ತೂರು ಚನ್ನಮ್ಮ ಸರ್ಕಲ್‌ ನಲ್ಲಿರುವ ನಗರದ ಆರಾಧ್ಯ ದೈವ ಆದಿಶೇಷನ ಜಾತ್ರಾ ಮಹೋತ್ಸವ ಅಪಾರ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ಜರುಗಿತು.

Advertisement

ಆದಿಶೇಷನ ದೇವಸ್ಥಾನದಿಂದ ಪ್ರಾರಂಭವಾದ ಉಚ್ಛಾಯ ಸೇವೆ ಕನಕದಾಸ ವೃತ್ತದ ಮೂಲಕ ಬನ್ನಿಮಹಂಕಾಳಿ ದೇವಸ್ಥಾನದವರೆಗೆ ಸಾಗಿತು. ಹಾದಿ ನಡುವೆ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಹೂವು, ಬಾಳೆ ಹಣ್ಣು, ಉತ್ತತ್ತಿಯನ್ನು ಅರ್ಪಿಸಿ, ಭಕ್ತಿ ಸಮರ್ಪಿಸಿದರು.

ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಅರುಣ್‌ ಎಚ್‌ .ದೇಸಾಯಿ ಚಾಲನೆ ನೀಡಿದರು. ಡೊಳ್ಳು, ಭಜನೆ, ವಾದ್ಯಮೇಳಗಳು ಜಾತ್ರಾ ಮಹೋತ್ಸವ ಕಳೆಹೆಚ್ಚಿಸಿದವು. ಬೆಳಗಿನ ಸಮಯದಲ್ಲಿ ಸುಮಂಗಲೆಯರು ಕಳಸ, ಕನ್ನಡಿ ಹಿಡಿದು ರಾಯಚೂರು ರಸ್ತೆಯ ಮೂಲಕ ಹಿರೇಹಳ್ಳಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿದರು. ತದನಂತರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬಂದು ವಿವಿಧ ಪೂಜಾ ವಿಧಿ ಗಳನ್ನು ನೆರವೇರಿಸಿದರು.

ಜಾತ್ರಾ ಮಹೋತ್ಸವದಲ್ಲಿ ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಆರ್‌ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ದೇವಸ್ಥಾನ ಸಮಿತಿ ಅಧ್ಯಕ್ಷ ಚನ್ನನಗೌಡ ಪಾಟೀಲ್‌, ಜಿಪಂ ಮಾಜಿ ಸದಸ್ಯ ಎನ್‌.ಶಿವನಗೌಡ ಗೋರೆಬಾಳ, ಜೆಡಿಎಸ್‌ ಯುವ ನಾಯಕ ಅಭಿಷೇಕ ನಾಡಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಧ್ವರಾಜ್‌ ಆಚಾರ್‌, ಕಾಂಗ್ರೆಸ್‌ ಮುಖಂಡ ರಾಜುಗೌಡ ಬಾದರ್ಲಿ, ವೀರಶೈವ ಸಂಘದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಶಿವಕುಮಾರ ಜವಳಿ, ನಗರಸಭೆ ಪೌರಾಯುಕ್ತ ಮಂಜೂನಾಥ ಗುಂಡೂರು, ಶರಣೇಗೌಡ ಬೆನ್ನೂರು, ಎನ್‌.ರಾಮನಗೌಡ ವಕೀಲ, ಶರಣಯ್ಯ ಸ್ವಾಮಿ ಕೋಟೆ, ರವಿ ಹಿರೇಮಠ,
ಹಂಪಯ್ಯಸ್ವಾಮಿ ರ್ಯಾವಿಹಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next