Advertisement

Farmers: ಗ್ರಾಮೀಣ ಭಾರತ ಬಂದ್‌- ದಿಲ್ಲಿ ಚಲೋ ಪ್ರತಿಭಟನೆಗೆ ಗ್ರಾಮ್ಯ ರೈತರ ಬೆಂಬಲ

12:46 AM Feb 16, 2024 | Team Udayavani |

ಹೊಸದಿಲ್ಲಿ: “ದಿಲ್ಲಿ ಚಲೋ’ ರೈತ ಪ್ರತಿಭಟನೆ ಮೂರನೇ ದಿನ ಪೂರೈಸಿದ ಬೆನ್ನಲ್ಲೇ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾರತೀಯ ಸಂಯುಕ್ತ ಕಿಸಾನ್‌ ಮೋರ್ಚಾ, ಕಿಸಾನ್‌ ಯೂನಿಯನ್‌ (ಬಿಕೆಯು) ಸೇರಿದಂತೆ ದೇಶದ ಹಲವಾರು ರೈತ ಸಂಘಟನೆಗಳು ಶುಕ್ರವಾರ “ಗ್ರಾಮೀಣ ಭಾರತ್‌ ಬಂದ್‌’ ನಡೆಸಲಿವೆ.

Advertisement

ಈ ಕುರಿತಂತೆ ಬಿಕೆಯು ನಾಯಕ ರಾಕೇಶ್‌ ಟಿಕಾಯತ್‌ ಮಾಹಿತಿ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 4ರ ವರೆಗೆ ದೇಶಾದ್ಯಂತ ಯಾವುದೇ ಗ್ರಾಮಗಳಲ್ಲೂ ಕೃಷಿ ಚಟುವಟಿಕೆ ಗಳನ್ನು ನಡೆಸದಂತೆ ಕರೆ ನೀಡಿದ್ದೇವೆ. ರೈತರೆಲ್ಲರೂ ಸಂಪೂರ್ಣವಾಗಿ ಕೃಷಿ ಚಟುವಟಿ ಕೆ ಸ್ಥಗಿತಗೊಳಿಸಲಿದ್ದಾರೆ. ರೈತರಾಗಲಿ, ಕೃಷಿ ಕಾರ್ಮಿಕರಾಗಲಿ ಕಾರ್ಯನಿರ್ವಹಿ­ಸುವುದಿಲ್ಲ ಎಂದಿದ್ದಾರೆ. ಪ್ರತಿಭಟನೆ ಭಾಗವಾಗಿ ರಸ್ತೆ ತಡೆ ಇರುತ್ತಾದರೂ ಹೆದ್ದಾರಿಗಳ ತಡೆ ಇರುವುದಿಲ್ಲ, ವ್ಯಾಪಾರ ಒಕ್ಕೂಟಗಳೂ ಬಂದ್‌ಗೆ ಬೆಂಬಲ ಸೂಚಿಸಲಿವೆ ಎಂದೂ ತಿಳಿಸಿದ್ದಾರೆ.

ರೈಲು ರೋಕೋ ಪ್ರತಿಭಟನೆ: ದಿಲ್ಲಿ ಚಲೋ ಬೆಂಬಲಿಸಿ ಪಂಜಾಬ್‌ನಲ್ಲಿ ಗುರುವಾರ ರೈತರು ರೈಲು ತಡೆ ನಡೆಸಿದ್ದು, ಇದರಿಂದ 6 ರೈಲುಗಳ ಮಾರ್ಗ ಬದಲಿಸುವಂತಾಗಿದೆ. ಚಂಡೀಗಢ ಮಾರ್ಗವಾಗಿ ರೈಲು ಸಂಚರಿಸಿವೆ.ಟೋಲ್‌ಗ‌ಳಲ್ಲೂ ರೈತರು ಪ್ರತಿಭಟಿಸಿದ್ದಾರೆ.

ನಾಳೆಯವರೆಗೆ ಅಂಜರ್ತಾಲ ಸ್ಥಗಿತ: ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣ ಸರಕಾರವು ಈಗಾಗಲೇ ರಾಜ್ಯದ 7 ಜಿಲ್ಲೆಗಳಲ್ಲಿ ವಿಧಿಸಿರುವ ಅಂತರ್ಜಾಲ ಸ್ಥಗಿತವನ್ನು ಮತ್ತೆ ಫೆ.17ರವರೆಗೂ ವಿಸ್ತರಿಸಿದೆ. ಇತ್ತ ಪಂಜಾಬ್‌ನಲ್ಲೂ 16ರ ವರೆಗೆ ಪಟಿಯಾಲಾ, ಸಂಗ್ರೂರ್‌, ಫ‌ತೇಹ್‌ಗಢ ಸಾಹಿಬ್‌ ಜಿಲ್ಲೆಗಳಲ್ಲಿ 16ರ ವರೆಗೆ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ.

ವಿಶ್ವಸಂಸ್ಥೆ ಮಧ್ಯಸ್ಥಿಕೆ ಕೋರಿದ ಅರ್ಜಿದಾರನಿಗೆ ಹೈ ತರಾಟೆ
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಸರಕಾರ ರಸ್ತೆ ತಡೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿ ದ್ದ ಅರ್ಜಿಯಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿರುವ ಅರ್ಜಿದಾರನನ್ನು ಪಂಜಾಬ್‌- ಹರಿಯಾಣ ಹೈ ಕೋರ್ಟ್‌ ತರಾಟೆ ತೆಗೆದುಕೊಂಡಿದೆ. ಮುಖ್ಯ ನ್ಯಾ| ಜಿ.ಎಸ್‌.ಸಂಧವಾಲಿಯಾ ಅವರ ನ್ಯಾಯಪೀಠ ನ್ಯಾಯಾಲಯದ ವ್ಯಾಪ್ತಿಗೆ ಪ್ರಕರಣ ತಂದ ಬಳಿಕವೂ ಹೇಗೆ ಮಧ್ಯಸ್ಥಿಕೆ ಕೋರುತ್ತೀರಿ ಎಂದು ಪ್ರಶ್ನಿಸಿದೆ.

Advertisement

ಮೋದಿ ವರ್ಚಸ್ಸಿಗೆ ಧಕ್ಕೆ ತರೋಣ: ಹೇಳಿಕೆ ವೈರಲ್‌
“ರಾಮ ಮಂದಿರದಿಂದಾಗಿ ಪ್ರಧಾನಿ ಮೋದಿ ಅವರ ವರ್ಚಸ್ಸು ಹೆಚ್ಚಿದೆ. ನಾವು ಆ ವರ್ಚಸ್ಸನ್ನು ಕೆಳಗಿಳಿಸಬೇಕು’. ಹೀಗೆಂದು ರೈತ ನಾಯಕ ಜಗಜಿತ್‌ಸಿಂಗ್‌ ದಲ್ಲೇವಾಲ್‌ ನೀಡಿರುವ ಹೇಳಿಕೆ ಯು ಭಾರೀ ವೈರಲ್‌ ಆಗಿದೆ. ಐಟಿ ಸಚಿವಾಲಯದ ಸಲಹೆಗಾರ ಕಂಚನ್‌ ಗುಪ್ತಾ ಈ ವೀಡಿಯೋ ಹಂಚಿಕೊಂಡು ರೈತ ಪ್ರತಿಭಟನೆಯ ಹೆಸರಿನ ಹಿಂದಿನ ನಿಜವಾದ ಉದ್ದೇಶ ಇದೇ ಎಂದಿದ್ದಾರೆ.

ರೈತರು ಪ್ರತಿಭಟನೆ ಮಾಡುತ್ತಿ ದ್ದಾರೆ, ದೇಶ ಹೊತ್ತಿ ಉರಿಯುತ್ತಿದೆ ಆದರೆ, ಬಿಜೆಪಿಗೆ ಈ ಬಗ್ಗೆ ಚಿಂತೆಯೇ ಇಲ್ಲ. ಇದು ಎಲ್ಲ ಲಕ್ಷ್ಮಣ ರೇಖೆಗಳನ್ನು ದಾಟಿದ ರಾವಣ ಸರಕಾರ.
ಮಮತಾ, ಪ.ಬಂಗಾಲ ಸಿಎಂ

ರೈತರು ಸೇನೆಗಳಂತೆ ನುಗ್ಗುತ್ತಾ, ರಾಜಕೀಯ ಹೇಳಿಕೆ ನೀಡುತ್ತಿ ದ್ದಾರೆ. ಎಲ್ಲರಿಗೂ ದಿಲ್ಲಿ ಪ್ರವೇಶಿಸುವ ಹಕ್ಕಿದೆ. ಆದರೆ, ರೈತರು ಅನುಸರಿಸು ತ್ತಿರುವ ರೀತಿ ಪ್ರಶ್ನಿಸುವಂತಿದೆ.
ಮನೋಹರ್‌ , ಹರಿಯಾಣ ಸಿಎಂ

ಪಿಎಂ ಮಾತಾಡಲಿ: ಆಗ್ರಹ
ರೈತ ಪ್ರತಿಭಟನೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸಚಿವರ ನಿಯೋಗದ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮಾತುಕತೆ ನಡೆಸಬೇಕು ಎಂದು ಕಿಸಾನ್‌ ಮಜದೂರ್‌ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್‌ ಸಿಂಗ್‌ ಪಾಂದೇರ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next